ವಿಶೇಷ ಚೇತನರಿಗೆ ತ್ರಿಚಕ್ರವಾಹನ ವಿತರಣೆ

0
122

ಸಿರುಗುಪ್ಪ: ನಗರದ ಕೃಷಿ ಇಲಾಖೆಯ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದಿಂದ 2019-20 ಹಾಗೂ 2020-21ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಡಿಯಲ್ಲಿ 22 ವಿಶೇಷ ಚೇತನರಿಗೆ ತ್ರಿಚಕ್ರ ಮೋಟಾರ್ ಬೈಕ್‌ಗಳನ್ನು ಶಾಸಕ ಎಂ.ಎಸ್.ಸೋಮಲಿAಗಪ್ಪ ಅವರು ವಿತರಿಸಿದರು.
ನಂತರ ಮಾತನಾಡಿದ ಅವರು ಅಂಗವಿಕಲರು ಸ್ವಾಭಿಮಾನದಿಂದ ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು, ಸರ್ಕಾರವು ನೀಡುವ ಮಾಸಿಕ ವೇತನದೊಂದಿಗೆ ಸ್ವಯಂ ಆಗಿ ಕೈಕೆಲಸ ಕಲಿತುಕೊಳ್ಳಬೇಕು, ಅಂಗವಿಕಲು ತಮ್ಮ ಕೆಲಸ ಕಾರ್ಯಗಳಿಗೆ ಇನ್ನೊಬ್ಬರ ಅವಲಂಬನೆಯನ್ನು ತಪ್ಪಿಸುವ ಉದ್ದೇಶಿದಿಂದ ಸರ್ಕಾರವು ಮಾಸಿಕ ವೇತನದೊಂದಿಗೆ ತ್ರಿಚಕ್ರ ವಾಹನಗಳನ್ನು ವಿತರಿಸುತ್ತಿದ್ದು, ಅಂಗವಿಕರ ಹಾಗೂ ವಿಶೇಷ ಚೇತನರ ಸರ್ವಾಂಗಿಣಿ ಅಭಿವೃದ್ದಿಗೆ ಬದ್ದವಾಗಿರುತ್ತದೆ.

Previous articleAIDSO ಪ್ರತಿಭಟನೆ
Next articleಆರಂಭಗೊಂಡ ವಾರದ ಸಂತೆ ನೀರಸ ಚಟುವಟಿಕೆ

LEAVE A REPLY

Please enter your comment!
Please enter your name here