ವಿಜಯನಗರ ಅಣೆಕಟ್ಟೆಯಲ್ಲಿ ಪ್ರತ್ಯಕ್ಷಗೊಂಡ ಜಲಪಾತಗಳು

0
176

ಸಿರುಗುಪ್ಪ: ತುಂಗಭದ್ರ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ತಾಲೂಕಿನ ಮಂತ್ರಾಲಯವೆAದೇ ಖ್ಯಾತಿ ಹೊಂದಿರುವ ಕೆಂಚನಗುಡ್ಡದ ವಸುದೇಂದ್ರ ತೀರ್ಥರ ಬೃಂದಾವನದ ಹತ್ತಿರ ತುಂಗಭದ್ರ ನದಿಗೆ ಅಂದಿನ ವಿಜಯನಗರ ಅರಸರ ಕಾಲದಲ್ಲಿ ಕೃಷಿಗಾಗಿ ಮೊದಲು ಕಟ್ಟೆಯೆಂದೇ ಹೆಸರಾಗಿರುವ ನೀರು ಸಂಗ್ರಹ ಆಣೆಕಟ್ಟುಗಳ ಮೇಲೆ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿವೆ.
ಪವರ್ ಪ್ಲಾಂಟ್‌ಗೆ ನೀರು ಹರಿಸಲು ಕಟ್ಟಲಾಗಿರುವ ಕಾಲುವೆ ಕಟ್ಟಡದ ಎಡಭಾಗದಲ್ಲಿ ಹಾಲು ಸುರಿದಂತೆ ನೀರು ಜಲಪಾತವಾಗಿ ಹರಿಯುತ್ತಿರುವುದು ದೂರದಿಂದ ನಯನ ಮನೋಹರವಾಗಿ ಕಾಣುತ್ತಿದೆ.
ಒಂದೂವರೆ ಕಿ.ಮಿ. ಉದ್ದದ ಗಂಗಮ್ಮನ ಕಟ್ಟೆ, ದೇಶನೂರು ಕಟ್ಟೆ, ಬೆಳ್ಳಕ್ಕಿ ಕಟ್ಟೆ ಮತ್ತು ವಿದ್ಯುತ್ ಘಟಕಕ್ಕೆ ನೀರು ಹರಿಸಲು ಕಟ್ಟಿರುವ ಕಾಲುವೆ ಮೇಲಿಂದ ನೀರಿನ ಜಲಧಾರೆ ಜಲಪಾತಗಳಂತೆ ಹರಿಯುತ್ತಿದೆ. ಹಾಲಿನ ನೊರೆ ಸುರಿದಂತೆ ಬೀಳುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿವೆ.

Previous articleಪಿ ಎಲ್ ಡಿ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಸತೀಶ್ ಅವಿರೋಧ ಆಯ್ಕೆ
Next articleಕಾಮಗಾರಿಗಳಿಂದ ಸಂಚಾರಕ್ಕೆ ಸಂಚಕಾರ

LEAVE A REPLY

Please enter your comment!
Please enter your name here