ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಾ, ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದ ‘ವಿಕ್ರಾಂತ್ ರೋಣ’ ಇಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕರ್ನಾಟಕ ಸೇರಿದಂತೆ ವಿಶ್ವದ ಪ್ರೇಕ್ಷಕರಿಗೆ ಇಂದು ವಿಕ್ರಾಂತ್ ರೋಣನ ದರ್ಶಣವಾಗಿದ್ದರೆ, ದುಬೈನ್ ಅಭಿಮಾನಿಗಳು ನಿನ್ನೆಯೇ ವಿಕ್ರಾಂತ್ ರೋಣನ ಫ್ಯಾಂಟಮ್ ಲೋಕವನ್ನು ಕಣ್ಣತುಂಬಿಕೊAಡಿದ್ದಾರೆ. ಗಲ್ಫ್ ದೇಶ ಹಾಗೂ ವಿಶ್ವದ ಬೇರೆ ಬೇರೆ ರಾಷ್ಟçಗಳಲ್ಲೂ ಕಿಚ್ಚನ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲಂತೂ ಕಿಚ್ಚನ ಅಭಿಮಾನಿಗಳು ಥಿಯೇಟರ್ ನಲ್ಲಿ ಹಬ್ಬದ ಖುಷಿ ತುಂಬಿದ್ದಾರೆ. 2ಡಿ ಹಾಗೂ 3ಡಿ ವರ್ಷನ್ನಲ್ಲಿ ತಯಾರಾಗಿರುವ ಈ ಸಿನಿಮಾ ಪಾಕಿಸ್ತಾನ ಸೇರಿದಂತೆ 30 ರಾಷ್ಟçಗಳ ಸುಮಾರು 4000 ಸ್ಕಿçÃನ್ಗಳಲ್ಲಿ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿಯೇ 450ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ತೆಲುಗು ಭಾಷೆಯ ಸಿನಿಮಾ 400 ಕ್ಕೂ ಹೆಚ್ಚು, ತಮಿಳು, 300 ಪ್ಲಸ್, ಮಲಯಾಳಂ 200 ಕ್ಕೂ ಹೆಚ್ಚು ಸ್ಕಿçÃನ್ಗಳಲ್ಲಿ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ವಿದೇಶಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ತೆರೆಗೆ ಬಂದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಗಳ್ಳಿ ರಿಲೀಸ್ ಆಗಲಿದ್ದು, ಹೆಚ್ಚಿನ ಸ್ಕಿçÃನ್ಗಳಲ್ಲಿ ಹಿಂದಿ ಭಾಷೆಯ ಸಿನಿಮಾ ಪ್ರದರ್ಶನವಾಗಿದೆ.
ವಿಕ್ರಾಂತ್ ರೋಣ ಸಿನಿಮಾ ಭಾವನೆಗಳು ಮತ್ತು ಟ್ವಿಸ್ಟ್ಗಳಿಂದ ತುಂಬಿದೆ. ಚಿತ್ರದ ನಿರ್ಮಾಣದ ರೀತಿ ಹಾಗೂ ಬಿಜಿಎಂ ಇದಕ್ಕೆ ಇನ್ನೂ ಹೆಚ್ಚಿನ ಮೆರಗು ನೀಡುತ್ತದೆ. ಈ ಸಿನಿಮಾದ ಹಾಡುಗಳು ನಿಜಕ್ಕೂ ರಸದೌತಣ ಬಡಿಸುತ್ತದೆ. ಹಾಡುಗಳಲ್ಲಿ ವಿಶೇಷವಾಗಿ ‘ರಾ ರಾ ರಕ್ಕಮ್ಮ …’ ಮತ್ತು ಲಾಲಿ ಸಾಂಗ್ ‘ರಾಜಕುಮಾರಿ …’ ಹಾಡುಗಳು ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ, ಇದರಲ್ಲಿ ಕಲಾವಿದರ ನಟನೆ ಸಹ ಅದ್ಬುತವಾಗಿದೆ. ಅನೂಪ್ ಭಂಡಾರಿ ಅವರ ಈ ಹಿಂದಿನ ರಂಗಿತರAಗ ಸಿನಿಮಾ ನೋಡಿವರಿಗೆ ಅವರ ನಿರ್ದೇಶನದ ಬಗ್ಗೆ ಅವರಿವಿರುತ್ತದೆ. ಒಂದು ಕಥೆಯನ್ನು ಸುಂದರವಾಗಿ ಹೇಳುವ ಕಲೆ ಅವರಲ್ಲಿದೆ. ಅದೇ ರೀತಿ ಈ ಸಿನಿಮಾ ಸಹ ಮೂಡಿ ಬಂದಿದ್ದು, ವಿಶ್ವದಾದ್ಯಂತ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗಿದ್ದು, ಟ್ವಿಟ್ಟರ್ ತಮ್ಮ ಅನುಭವ ಬರೆದು ಹಾಕಿದ್ದಾರೆ. ವಿಕ್ರಾಂತ್ ರೋಣಾ 147 ನಿಮಿಷಗಳ ಸಿನಿಮಾವಾಗಿದ್ದು, ಅದ್ಭುತ ಘಟನೆಗಳು, ಊಹಿಸಲಾಗದ ಟ್ವಿಸ್ಟ್ಗಳ ಜೊತೆ ಉತ್ತಮ ಅದರ ಛಾಯಾಗ್ರಹಣಕ್ಕಾಗಿ ಜನರಿಗೆ ಬಹಳ ಇಷ್ಟವಾಗಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ಕಿಚ್ಚನ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಈಗಾಗಲೇ ವಿಮರ್ಶೆಗಳು ಟ್ವಿಟರ್ನಲ್ಲಿ ಬಿರುಗಾಳಿ ಎಬ್ಬಿಸಿದೆ ಮತ್ತು ಸಿನಿಪ್ರಿಯರು ಒಮ್ಮತದಿಂದ ಚಿತ್ರ ಮತ್ತು ಸುದೀಪ್ ಅಭಿನಯದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟಿಜನ್ಗಳು ಚಿತ್ರದ ಕಥಾವಸ್ತು ಮತ್ತು ನಿರ್ದೇಶಕರ ಕಥೆ ಹೇಳುವ ರೀತಿಯನ್ನು ಬಹಳ ಮೆಚ್ಚಿಕೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಶಾಲಿನಿ ಆರ್ಟ್ಸ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶಾಲಿನಿ ಮಂಜುನಾಥ್, ಜಾಕ್ ಮಂಜುನಾಥ್ ನಿರ್ಮಾಪಕರು. ಇವರಿಗೆ ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ‘ರಂಗಿತರAಗ’ ಖ್ಯಾತಿಯ ಅನೂಪ್ ಭಂಡಾರಿ. ಉಳಿದಂತೆ ಅಜನೀಶ್ ಲೋಕನಾಥ್ ಸಂಗೀತ, ಶಿವಕುಮಾರ್ ಕಲೆ ಇದೆ. ಚಿತ್ರದಲ್ಲಿ ಸುದೀಪ್ ಜಾಕ್ವೆಲಿನ್ ಪರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಮುಂತಾದವರು ಅಭಿನಯಿಸಿದ್ದಾರೆ.