-5.3 C
New York
Sunday, January 23, 2022

Buy now

spot_img

ವಾಲ್ಮೀಕಿ ನೌಕರರ ಸಂಘದಿಂದ ಸನ್ಮಾನ

ಹಗರಿಬೊಮ್ಮನಹಳ್ಳಿ : ಇತ್ತೀಚೆಗೆ ಜೆಸ್ಕಾಂ ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಅಂಜಿನಪ್ಪ. ಡಿ ಅವರಿಗೆ ತಾಲೂಕು ವಾಲ್ಮೀಕಿ ನೌಕರರ ಸಂಘ ದಿಂದ ಸನ್ಮಾನಿಸಲಾಯಿತು.

ಸನ್ಮಾನಿಸಿ ಮಾತನಾಡಿದ ವಾಲ್ಮೀಕಿ ನೌ. ಸ. ಮಾಜಿ ಅಧ್ಯಕ್ಷ ಹಾಗೂ ಗಂ.ಭೀ.ಸ. ಪ್ರೌಢ ಶಾಲೆಯ ಉಪ ಪ್ರಾಚಾರ್ಯರಾದ ವಿ. ಮಲ್ಲಪ್ಪ ಮಾತನಾಡಿ ಜೆಸ್ಕಾಂ ಇಲಾಖೆಯಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಅಂಜಿನಪ್ಪ ಅವರಿಗೆ ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.


ನಂತರ ವಾಲ್ಮೀಕಿ ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷರು ಟಿ ಸೋಮಶೇಖರ್ ಮಾತನಾಡಿದ ಅಂಜಿನಪ್ಪ ಸಾರ್ ಅವರು ತಾಲೂಕು ವಾಲ್ಮೀಕಿ ನೌಕರರ ಸಂಘದಲ್ಲಿ ನಾಲ್ಕು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಸಮಾಜದ ಯಾವುದೇ ಕೆಲಸ ಇದ್ದರು ಸದಾ ಹಸನ್ಮುಖಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ಮಾಡುತ್ತಿದ್ದರು. ಕೋವಿಡ್ ಒತ್ತಡಗಳ ಮಧ್ಯ ಸುಖಾಂತವಾದ ನಿವೃತ್ತಿ ಹೊಂದಿರುವುದು ಸೌಭಾಗ್ಯವೇ ಸರಿ, ತಮ್ಮ ನಿವೃತ್ತಿ ಜೀವನವು ನಮ್ಮ ಸಮಾಜಕ್ಕೆ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ನೌಕರ ಸಂಘದ ಮಾಜಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಪ್ರೌಢಶಾಲೆ ಶಿಕ್ಷಕರಾದ ಸುರೇಶ್ ಮಂಜುನಾಥ ಟಿ ಸಕಲೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರಾದ ಪರಶುರಾಮ.ಬಿ.ಪ್ರಾಕಾಶ್ ಮೋಹನ ಅಣಜಿ. ಯು ರಾಮಕೃಷ್ಣ. ಮಾಳಿಗಿ ಸ್ವಾಮಿ. ರಾಜಪ್ಪ ಕತ್ತೆರ ಕೊಟ್ರೇಶ್ . ನಿವೃತ್ತ ಶಿಕ್ಷಕರಾದ ರಾಮಣ್ಣ. ಹನುಮಂತಪ್ಪ ಚಂದ್ರಾಮಪ್ಪ ಇತರರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,131FollowersFollow
0SubscribersSubscribe
- Advertisement -spot_img

Latest Articles