ಮರಿಯಮ್ಮನಹಳ್ಳಿ:ವಿಜಯನಗರ
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರದ ಸಂತೆ ನಿಷೇದಿಸಿದರು, ಆದೇಶವನ್ನು ಉಲ್ಲಂಘಿಸಿರುವ ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.ಪಟ್ಟಣದಲ್ಲಿ
ಕೊರೊನಾ ಪ್ರಕರಣಗಳ ಏರಿಕೆ ಹಿನ್ನಲೆ ಜ.31ರ ವರೆಗೆ ಕರೀಣ ಕ್ರಮದ ಹಿನ್ನೆಲೆಯಲ್ಲಿ ವಾರದ ಸಂತೆ ಸೇರಿದಂತೆ ಯಾವುದೇ ಸಂತೆ- ಮಾರುಕಟ್ಟೆ ತೆರೆಯುವಂತಿಲ್ಲ ಎಂದು ಪ.ಪಂ. ಆದೇಶ ಹೊರಡಿಸಿದೆ.ಕಳೆದ ವಾರವೆ ಮುಂದಿನ ಸೋಮವಾರ ಸಂತೆ ರದ್ದುಗೊಳಿಸಿದ್ದನ್ನು ಪ.ಪಂ.ಅಧಿಕಾರಿಗಳು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿದರು, ನಮಗೆ ಮಾಹಿತಿಯಿಲ್ಲ ನೀವು ಏಕಾ-ಏಕಿ ಸಂತೆ ರದ್ದುಗೊಳಿಸಿದರೆ ನಮಗೆ ತೊಂದರೆಯಾಗುತ್ತದೆಂದು ಅಲವತ್ತುಕೊಂಡರು. ಆದರೆ ಅಧಿಕಾರಿಗಳು ಹಾಗೂ ಮಾರುಕಟ್ಟೆ ವ್ಯಾಪರಿಗಳ ಸಮನ್ವಯ ಕೊರತೆಯಿಂದ ವ್ಯಾಪರಸ್ತರು ವಾರದ ಸಂತೆಗಾಗಿ ತರಕಾರಿ ಸೇರಿ ದಂತೆ ಇತರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಬಂದಿದ್ದರು. ಕೆಲ ಕಾಲ ಅಧಿಕಾರಿಗಳು ಹಾಗೂ ವ್ಯಾಪರಸ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.ಪಟ್ಟಣದ ಸಮುದಾಯ ಆರೋಗ್ಯ ಉದ್ಘಾಟನೆಗಾಗಿ ಪಟ್ಟಣಕ್ಕೆ ಆಗಮಿಸಿದ
ಶಾಸಕ ಭೀಮಾನಾಯ್ಕ ಅವರಿಗೆ ವ್ಯಾಪಾರಿಗಳು ಮನವಿ ಮಾಡಿದ್ದರಿಂದ ಅಧಿಕಾರಿಗಳಿಗೆ ಒಂದು ಅವಕಾಶ ನೀಡಿ ಎಂದು ತಿಳಿಸಿದರು. ನಂತರ ವ್ಯಾಪರ ನಡೆಯಿತು.