20.8 C
New York
Saturday, September 25, 2021

Buy now

spot_img

ರಾಷ್ಟಿçಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ್ ರಾಷ್ಟçಮಟ್ಟದ ಕಿರುಚಿತ್ರ ಸ್ಪರ್ಧೆಗೆ ಆಹ್ವಾನ

ಕೊಪ್ಪಳ: ಸಮಗ್ರ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಎಲ್ಲಾ ಗ್ರಾಮಗಳಲ್ಲಿ ಶೌಚಾಲಯಗಳ ಬಳಕೆ ಸುಸ್ಥಿರತೆಯನ್ನು ಕಾಯ್ದುಕೊಂಡು ಓಡಿಎಫ್+ ನ ಹಾದಿಯಲ್ಲಿ ಸಾಗುವ ಮೂಲಕ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ (2014-19) 1ನೇ ಹಂತದಲ್ಲಿ ಸಾಧಿಸಿದ ಅಸಾಮಾನ್ಯ ಮೈಲಿಗಲ್ಲನ್ನು ಮುಂದೆ ಸಾಗಿಸಲು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಉದ್ದೇಶಿಸಿದೆ.
ಇದರ ಅಂಗವಾಗಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2 ಯೋಜನೆಯಡಿ ರಾಷ್ಟಿçÃಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ್ (ಅಜಾದ್ ಕಾ ಅಮೃತ್ ಮಹೋತ್ಸವ್) ಎಂಬ ಹೆಸರಿನಡಿ ರಾಷ್ಟಿçÃಯ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ರಾಷ್ಟಿçÃಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ್ ರಾಷ್ಟಿçÃಯ ಕಿರುಚಿತ್ರ ಸ್ಪರ್ಧೆಯ ಮರುಭೂಮಿ ಪ್ರದೇಶ, ಗುಡ್ಡಗಾಡು ಪ್ರದೇಶ, ಕರಾವಳಿ ಪ್ರದೇಶ, ಬಯಲು ಪ್ರದೇಶ, ಪ್ರವಾಹ ಪೀಡಿತ ಪ್ರದೇಶ ವಲಯದ ವಿಜೇತರಿಗೆ ಪ್ರಥಮ ಬಹುಮಾನ ರೂ. 2,00,000/-, ದ್ವಿತೀಯ ಬಹುಮಾನ ರೂ.1,20,000/-, ತೃತೀಯ ಬಹುಮಾನ 80,000/- ರೂ. ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು.
ರಾಷ್ಟಿçÃಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ್ ರಾಷ್ಟಿçÃಯ ಕಿರುಚಿತ್ರ ಸ್ಪರ್ಧೆಯ ವಿಷಯಾಧಾರಿತ ವಿಭಾಗಗಳಾದ ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ, ಮಲತ್ಯಾಜ್ಯ ನಿರ್ವಹಣೆ ಮತ್ತು ನಡವಳಿಕೆ ಬದಲಾವಣೆ ಸೇರಿ ಒಟ್ಟು 06 ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1,60,000 ರೂ., ದ್ವಿತೀಯ ಬಹುಮಾನ 60,000 ರೂ., ತೃತೀಯ ಬಹುಮಾನ 30,000 ರೂ. ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,956FollowersFollow
0SubscribersSubscribe
- Advertisement -spot_img

Latest Articles