ಇದು ಕಲಿಗಾಲ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಮಾತೇ ಇದೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಯಶ್ 50 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ಹರಿದಾಡ್ತಿದೆ. kgf 2” ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿದ್ದ ಬೆನ್ನಲ್ಲೇ ಈಗೊಂದು ಸುದ್ದಿ ನೋಡಿ ಕೆಲವರು ನಿಜ ಎಂದುಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ kgf 2′ ಸೂಪರ್ ಹಿಟ್ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಮಡದಿ ರಾಧಿಕಾ ಪಂಡಿತ್ ಜೊತೆ ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ಯಶ್ ಮುಂದಿನ ಸಿನಿಮಾ ಯಾವುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ರಾಕಿಂಗ್ ಸ್ಟಾರ್ ಮಾತ್ರ ಸರಿಯಾದ ಕಥೆ ಸಿಗುವವರೆಗೂ ಮಾತನಾಡುವುದು ಬೇಡ ಎಂದು ನರ್ಧರಿಸಿದ್ದಾರೆ. ‘ಏಉಈ’ ಸರಣಿ ಸಿನಿಮಾಗಳ ರೀತಿಯಲ್ಲೇ ಮತ್ತೊಂದು ಹೈವೋಲ್ಟೇಜ್ ಪ್ರಾಜೆಕ್ಟ್ಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ರ್ತ್ಡೇ ಪರ್ಟಿಯಲ್ಲಿ ಯಶ್ ಭಾಗವಹಿಸಿದ್ದರು.
ಯಶ್ ಮುಂದಿನ ಸಿನಿಮಾ ಯಾವುದು ಅನ್ನುವ ರ್ಚೆಯ ನಡುವೆ ಹೊಸ ಸುದ್ದಿ ಅಭಿಮಾನಿಗಳ ಹುಬ್ಬೇರಿಸಿದೆ. ಯಶ್ ರಾಮ ಮಂದಿರ ನರ್ಮಾಣಕ್ಕೆ 50 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿ ಕೆಲವರು ಅಚ್ಚರಿಗೊಂಡಿದ್ದಾರೆ. ಆದರೆ ಇದು ಸುಳ್ಳು ಎನ್ನುವುದು ಖಚಿತವಾಗುತ್ತಿದೆ. ಒಂದು ವೇಳೆ ಯಶ್ ನಿಜಕ್ಕೂ ಅಷ್ಟು ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದರೆ ಇಷ್ಟೊತ್ತಿಗೆ ದೊಡ್ಡ ಸುದ್ದಿ ಆಗುತ್ತಿತ್ತು. ಇದು ಕೇವಲ ಗಾಳಿಸುದ್ದಿ ಅಷ್ಟೆ ಅನ್ನುವುದು ಸ್ಪಷ್ಟವಾಗುತ್ತಿದೆ.
50 ಕೋಟಿ ದೇಣಿಗೆ ಸುದ್ದಿ ಹುಟ್ಟಿಕೊಂಡಿದ್ದು ಹೇಗೆ?
ಇತ್ತೀಚೆಗೆ ಸಂತೋಷ್ ತ್ರಿಪಾಠಿ ಅನ್ನುವ ಫೇಸ್ಬುಕ್ ಖಾತೆಯಲ್ಲಿ ಯಶ್ ದೇವಸ್ಥಾನದಲ್ಲಿ ಇರುವ ಫೋಟೊವೊಂದರನ್ನು ಶೇರ್ ಮಾಡಿದ್ದರು. “ದಕ್ಷಿಣದ ಸ್ಟಾರ್ ನಟ ಯಶ್ ಕುಮಾರ್ ಅಯೋಧ್ಯೆ ರಾಮಮಂದಿರದ ರಾಮ್ಲಲ್ಲಾಗೆ ಭೇಟಿ ನೀಡಿದ್ದರು. ಈ ವೇಳೆ ಮಂದಿರ ನರ್ಮಾಣಕ್ಕೆ 50 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ” ಎಂದು ಫೋಟೊ ಜೊತೆಗೆ ಬರೆದಿದ್ದರು. ಈ ಪೋಸ್ಟ್ ವೈರಲ್ ಆಗಿ ಇಂತಾದೊಂದು ಸುದ್ದಿ ಹರಿದಾಡಲು ಶುರುವಾಗಿತ್ತು.