13.3 C
New York
Wednesday, October 27, 2021

Buy now

spot_img

“ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ”:ಇಂಧನ ಸಚಿವ ಸುನೀಲ್ ಕುಮಾರ್

ಬೆಂಗಳೂರು: ಮೂರು ಹಂತದಲ್ಲಿ ಸ್ಮಾರ್ಟ್ ಹಾಗು ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ, ಮೊದಲು ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡುತ್ತೇವೆ ಈಗಾಗಲೇ 5792 ಕೋಟಿ ವಿದ್ಯುತ್ ಬಿಲ್ ಸರ್ಕಾರಿ ಕಚೇರಿಗಳಿಂದ ಬಾಕಿ ಬರಬೇಕಿದೆ ಹಾಗಾಗಿ ಅಲ್ಲಿ ಮೊದಲು ಅಳವಡಿಕೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಹೊಸ ಕಟ್ಟಡ ನಿರ್ಮಾಣ ವೇಳೆ ಪಡೆಯುವ ತಾತ್ಕಾಲಿಕ ಸಂಕರ್ಪಕ್ಕೆ ಸ್ಮಾರ್ಟ್ ಮೀಟರ್(ಪ್ರೀಪೇಡ್) ಅಳವಡಿಸಲಾಗುತ್ತದೆ ಮೂರನೆಯದಾಗಿ 27 ಅಮೃತ ಸಿಟುಗಳಿಗೆ ಅಳವಡಿಸಲಾಗುತ್ತದೆ ಎಂದರು.
ಶೇ. 15 ಕ್ಕೂ ಹೆಚ್ಚು ವಿದ್ಯುತ್ ಬಿಲ್ ನಷ್ಟವಾಗುತ್ತಿರುವ ಕಡೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಹೇಳಿದೆ ಅದರಂತೆ ಅಳವಡಿಕೆ ಮಾಡಲಾಗುತ್ತದೆ.ಮೀಟರ್ ಅಳವಡಿಕೆಗೆ ಗ್ರಾಹಕರ ಮೇಲೆ ಹೊರಹಾಕಲ್ಲ,‌ಎಸ್ಕಾಂ ಗಳೇ ಭರಿಸಲಿವೆ, ಆದರೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್, ಪ್ರೀಪೇಡ್ ಮೀಟರ್ ಗಳನ್ನು, ಕೃಷು ಪಂಪ್ ಸೆಂಟ್ ಗಳಿಗೆ ಹಾಕಲ್ಲ.ಅಂತಹ ಪ್ರಯೋಗವನ್ನೂ ಮಾಡುವುದಿಲ್ಲ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,996FollowersFollow
0SubscribersSubscribe
- Advertisement -spot_img

Latest Articles