ಸಿರುಗುಪ್ಪ: ದೇಶಕ್ಕಾಗಿ ಹೋರಾಡಿದ ಮಹಾನ್ ದೇಶಪ್ರೇಮಿಗಳ ತ್ಯಾಗ ಬಲಿದಾನ, ರಕ್ತ ಕ್ರಾಂತಿಯಿoದಾಗಿ ನಮಗೆ ಸ್ವಾತಂತ್ರö್ಯ ದೊರೆಕಿದೆಯೇ ಹೊರತು ನೆಹರು ಕುಟುಂಬ ಸಾರಿದ ಅಹಿಂಸಾ ಮಾರ್ಗದಿಂದಲ್ಲವೆoದು ಬಿಜೆಪಿ ಯುವ ಮೋರ್ಚಾದ ರಾಷ್ಟಿçÃಯ ಉಪಾಧ್ಯಕ್ಷ ಶ್ರೀರಾಮ್ ಸತ್ಪುತೆಜೀ ತಿಳಿಸಿದರು.
ನಗರದ ಮಹಾತ್ಮಗಾಂಧೀಜಿ ವೃತ್ತದಿಂದ ಕೆಂಚನ ಗುಡ್ಡ ಗ್ರಾಮದ ಶ್ರೀ ಸುಬುದೇಂದ್ರ ತೀರ್ಥರ ಮಠದವರೆಗೂ ಜಿಲ್ಲಾ ಮತ್ತು ತಾಲೂಕು ಯುವ ಮೋರ್ಚಾ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರಿಂದ 200ಕ್ಕೂ ಅಧಿಕ ಬೈಕ್ಗಳಿಗೆ ರಾಷ್ಟçಧ್ವಜ ಕಟ್ಟಿಕೊಂಡು ಬೃಹತ್ ತಿರಂಗಾ ಬೈಕ್ರ್ಯಾಲಿಯಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.
ನಂತರ ಕೆಂಚನ ಗುಡ್ಡದ ವಿಜಯನಗರ ಅಣೆಕಟ್ಟು ಬಳಿ ಮಾತನಾಡಿದ ಅವರು ಈ ದೇಶದ ಸ್ವತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರಾಣಿ ಅಬ್ಬಕ್ಕದೇವಿ, ಕಿತ್ತೂರು ರಾಣಿಚೆನ್ನಮ್ಮ, ಕೆಳದಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುಭಾಷ್ ಚಂದ್ರಬೋಷ್, ಭಗತ್ ಸಿಂಗ್, ಲಾಲಾ ಲಜಪತ್ರಾಯ್, ಬಾಲಾ ಗಂಗಾಧರ ತಿಲಕ್ ಬಿಪಿನ್ ಚಂದ್ರ ಪಾಲ್ರಂತಹ ಕ್ರಾಂತಿ ಕಾರಕ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರö್ಯದೊರೆಕಿದ್ದು, ಮೋದೀಜಿಯವರ ಆಡಳಿತದಲ್ಲಿ ಅಂತಹ ಮಹಾನ್ ಹೋರಾಟಗಾರರಿಗೆ ಗೌರವ ಮನ್ನಣೆ ದೊರೆಯುವಂತಾಗಿದೆ.
ಅAತಹ ದೇಶಭಕ್ತರಿಗೆ 75ನೇ ಆಜಾದಿ ಕಾ ಅಮೃತ್ ಮಹೋತ್ಸವದ ವೇಳೆ ಇಡೀ ರಾಷ್ಟಾçದ್ಯಂತ ಪ್ರತಿ ಮನೆ ಮನೆಯ ಮೇಲೂ ಅ.13 ರಿಂದ ಅ.15ರವರೆಗೆ ತಿರಂಗಾ ಧ್ವಜವನ್ನು ಹಾರಿಸಿ ಗೌರವ ಸಮರ್ಪಣೆ ಮಾಡುವುದರೊಂದಿಗೆ ದೇಶ ಪ್ರೇಮವನ್ನು ಮೆರೆಯೋಣವೆಂದು ತಿಳಿಸಿದರು.
ಇದೇ ವೇಳೆ ಬಿ.ಜೆ.ಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ, ರಾಜ್ಯ ಕಾರ್ಯದರ್ಶಿ ಅಂಬರೀಶ ರೈತನೂರು, ಜಿಲ್ಲಾಧ್ಯಕ್ಷ ಸೋಮನಗೌಡ, ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ಮಂಡಲ ಅಧ್ಯಕ್ಷ ಆರ್.ಸಿ.ಪಂಪನಗೌಡ, ಪ್ರಧಾನ ಕಾರ್ಯದರ್ಶಿ ಬಂಡ್ರಾಳ್ ಮಲ್ಲಿಕಾರ್ಜುನ, ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಕೆ.ಎಂ.ಮAಜುಳಾ, ತಾಲೂಕು ಅಧ್ಯಕ್ಷೆ ಅನ್ನಪೂರ್ಣ, ನಗರಘಟಕ ಅಧ್ಯಕ್ಷ ಪ್ರೂಟ್ ಗಂಗಾಧರ, ಮುಖಂಡರಾದ ವೆಂಕಟಪ್ಪ ನಾಯಕ, ಹೊನ್ನಪ್ಪ, ಶೇಖಪ್ಪ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.