ಮೊಹರಂ ಹಬ್ಬದ ಶಾಂತಿ ಸಭೆ

0
197
????????????????????????????????????

ಸಿರುಗುಪ್ಪ: ನಗರದ ಪೋಲೀಸ್ ಠಾಣೆಯ ಆವರಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಸರ್ವಧರ್ಮೀಯರ ಶಾಂತಿ ಸಭೆ ನಡೆಯಿತು.
ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಮಾತನಾಡಿ ಕೋವಿಡ್-19 ಹಿನ್ನಲೆಯಲ್ಲಿ ಮೊಹರಂ ಕುರಿತಾಗಿ ಸರ್ಕಾರವು ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕೋವಿಡ್ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಗುಂಪು ಗುಂಪಾಗಿ ಜನ ಸೇರದೇ ಪ್ರತೀ ವರ್ಷದಂತೆ ಸೌಹಾರ್ಧತೆಯಿಂದ ಸರ್ವಧರ್ಮೀಯರು ಸೇರಿ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು ತಿಳಿಸಿದರು.
ವಲಯ ಪೋಲೀಸ್ ನೀರೀಕ್ಷಕ ಟಿ.ಆರ್.ಪವಾರ್ ಮಾತನಾಡಿ ಈಗಾಗಲೇ ಕೆಲವು ನಿಷೇದಿಸಿದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೊರತುಪಡಿಸಿ ಇನ್ನುಳಿದ ಮಸೀದಿಗಳಲ್ಲಿ ಆಲಂ ಅಥವಾ ಪೀರಲ ದೇವರನ್ನು ಕೂಡಿಸಬೇಕು, ತಪ್ಪಡಿ, ತಾಷಾ, ರಂಡೋಲ್‌ಗಳನ್ನು ಭಾರಿಸುವುದನ್ನು ನಿಷೇದಿಸಲಾಗಿದ್ದು, ನೈಟ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಆಲಯ್ ಆಡುವುದು, ದೇವರುಗಳ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ, 10ವರ್ಷದೊಳಗಿನ ಮಕ್ಕಳು ಮತ್ತು 60ವರ್ಷ ಮೇಲ್ಪಟ್ಟ ಹಿರಿಯ ವ್ಯಕ್ತಿಗಳನ್ನು ಹಬ್ಬದಲ್ಲಿ ಭಾಗಹಿಸದಂತೆ ನೋಡಿಕೊಳ್ಳಬೇಕು, ಕೂಡಿಸಿದ ದೇವರುಗಳನ್ನು ಅಲ್ಲೇ ವಿಸರ್ಜಿಸಿ ಸರಳವಾಗಿ ಆಚರಣೆ ಮಾಡಬೇಕೆಂದು ತಿಳಿಸಿದರು.

Previous articleಸ್ವಾತಂತ್ರ ಸಂಗ್ರಾಮದ ಕ್ರಾಂತಿಕಾರಿ ಖುದಿರಾಮ್ ಬೋಸ್ !
Next articleಭಾರತೀಯ ಕ್ರೀಡಾಕ್ಷೇತ್ರಕ್ಕೆ ಹೊಸ ಹುರುಪು ನೀಡಿದ ಚಿನ್ನದ ಹುಡುಗ

LEAVE A REPLY

Please enter your comment!
Please enter your name here