ಮಾಸ್ಕ್ ಧರಿಸದವರಿಗೆ ದಂಡದ ಬಿಸಿ

0
143


ಸಿರುಗುಪ್ಪ: ನಗರದಲ್ಲಿ ಕೋವಿಡ್-19 ಇಳಿಮುಖವಾಗುತ್ತಿದ್ದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನಗರದ ವಾಣಿಜ್ಯ ಮಳಿಗೆಗಳಲ್ಲಿ, ಬಸ್‌ನಿಲ್ದಾಣಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ, ಕೋವಿಡ್ ನಿಯಮಾವಳಿಗಳನ್ನು ಅನುಸರಿಸದೇ ವ್ಯವಹರಿಸುತ್ತಿದ್ದ ವರ್ತಕರಿಗೆ, ಹಾಗೂ ರಸ್ತೆಬದಿ ವ್ಯಾಪಾರಿಗಳಿಗೆ, ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ತಾಲೂಕು ಮಟ್ಟದ ಅಧಿಕಾರಿಗಳ ತಂಡದೊAದಿಗೆ ಸಂಚರಿಸಿ ತಹಶಿಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ದಂಡವಿದಿಸಿದರು.
ನಂತರ ಮಾತನಾಡಿದ ಅವರು ಈಗಾಗಲೇ ಕೋವಿಡ್-19 ಒಂದು ಮತ್ತು ಎರಡನೇ ಅಲೆಯಿಂದಾಗಿ ಅನೇಕ ಗಂಭೀರ ತೊಂದರೆಗಳನ್ನು ಅನುಭವಿಸಿದ್ದು ಸಾಕು ಈಗಿನಿಂದಲೇ ಎಚ್ಚರವಾಗಬೇಕು, ರಾಜ್ಯ ಹಾಗೂ ದೇಶದಲ್ಲಿ ಕೋರೋನಾ ಮೂರನೇ ಅಲೆಯು ತೀವ್ರ ಪರಿಣಾಮ ಬೀರಿದ್ದು ವರ್ತಕರು, ರಸ್ತೆಬದಿ ವ್ಯಾಪಾರಿಗಳು, ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ ಗ್ರಾಹಕರಿಗೆ ಅರಿವು ಮೂಡಿಸಬೇಕು, ಮಾಸ್ಕ್ ಧರಿಸಿ ಒಳಗೆ ಬರುವಂತೆ ಸೂಚನಾ ಫಲಕಗಳನ್ನು ಹಾಕಬೇಕು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸಾಮಾಜಿಕ ಅಂತರ ಪಾಲನೆ ಮಾಡುವುದು ಅತ್ಯಗತ್ಯವಾಗಿದ್ದು, ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ ಕೋವಿಡ್‌ನ ಮೂರನೇ ಅಲೆ ನಮ್ಮ ತಾಲೂಕಿಗೆ ಹರಡÀದಂತೆ ಎಚ್ಚರವಹಿಸಲು ಎಲ್ಲಾ ನಾಗರೀಕರ, ಸಂಘಸAಸ್ಥೆಗಳು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ತಿಳಿಸಿದರು.

Previous articleCBSE 10ನೇ ತರಗತಿ ಫಲಿತಾಂಶ ಪ್ರಕಟ
Next articleಮಾಸ್ಕ್ ಇಲ್ಲದೆ ಓಡಾಡಿದರೆ ದಂಡ ಗ್ಯಾರಂಟಿ: ಮಹಾನಗರ ಪಾಲಿಕೆ ಆಯುಕ್ತೆ ಪ್ರಿತಿ ಗೇಹ್ಲೋಟ್

LEAVE A REPLY

Please enter your comment!
Please enter your name here