ಮಳೆಯಿಂದಾಗಿ ಮನೆಹಾನಿ ತಹಶೀಲ್ದಾರರಿಂದ ಪರಿಶೀಲನೆ

0
281

ಸಿರುಗುಪ್ಪ: ತಾಲೂಕಿನ ಬಾಗೆವಾಡಿ ಗ್ರಾಮ ಪಂಚಾಯಿತಿಯ ವ್ಯಾಪಿಯ ನಂದಿಪುರ ಕ್ಯಾಂಪಿನಲ್ಲಿ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಮನೆಯನ್ನು ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಿವಾಸಿ ಶೇಷಗಿರಿ ರಾವ್ ದಂಪತಿಗಳಿಬ್ಬರು ತಮಗೆ ಸ್ವಂತ ಜಮೀನಿಲ್ಲದೇ ವಾಸಕ್ಕೆ ಮಾತ್ರ ಈ ಪುಟ್ಟ ಗುಡಿಸಿಲಿದ್ದು, ಮಳೆಯಿಂದಾಗಿ ಮುಂಭಾಗದ ಗೋಡೆಯು ಬಿದ್ದುಹೋಗಿದೆ, ಗುಡಿಸಿಲಿನ ಹುಲ್ಲಿನ ಛಾವಣಿಯು ಕೊಳೆತು ಸೋರುತ್ತಿದಲ್ಲದೇ ಒಳಗಡೆ ಕುಸಿದು ಬೀಳುತ್ತಿದೆ ಅದಕ್ಕಾಗಿ ಮೇಲ್ಛಾವಣಿಯನ್ನು ಹೊದಿಸಲು ಪ್ಲಾಸ್ಟಿಕ್ ಚೀಲಗಳನ್ನು ಕೈಯಿಂದಲೇ ಹೊಲಿಯುತ್ತಿರುವುದಾಗಿ ನಮಗೆ ಪರಿಹಾರವನ್ನು ಒದಗಿಸಬೇಕೆಂದು ಕೇಳಿದರು.

Previous articleಉಚಿತ ಹೊಲಿಗೆ ಯಂತ್ರ, ದಿನಸಿ ಕಿಟ್‌ಗಳ ವಿತರಣೆ
Next articleಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದ ಕೊಪ್ಪಳ ತಾ.ಪಂ ಇಒ

LEAVE A REPLY

Please enter your comment!
Please enter your name here