ಮಳೆಗೆ ನೆಲಕಚ್ಚಿದ ಭತ್ತದ ಬೆಳೆಯನ್ನು ಜಿಲ್ಲಾ ಜಂಟಿ ಕೃಷಿ ನೇತೃತ್ವದ ತಂಡ ಪರಿಶೀಲನೆ

0
93

ಸಿರುಗುಪ್ಪ: ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕುರುಳಿದ ಪ್ರದೇಶಕ್ಕೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಮತ್ತು ತಂಡ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತುಂಗಭದಾ ನದಿ, ವೇದಾವತಿ ಹಗರಿ ನದಿ, ಕಾಲುವೆ ಹಾಗೂ ಪಂಪ್‌ಸೆಟ್ ನೀರಿನ ಮೂಲಗಳಿಂದ ತಾಲೂಕಿನಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಶೇ.40 ಭತ್ತದ ಕಟಾವು ಕಾರ್ಯ ಮುಗಿದಿದೆ. ಆದರೆ, ಇನ್ನೂ ಕಟಾವು ಹಂತದಲ್ಲಿದ್ದ ಭತ್ತದ ಬೆಳೆ ಅಕಾಲಿಕ ಮಳೆಯಿಂದಾಗಿ ನೆಲಕ್ಕುರುಳಿದ್ದು, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ರೈತರು ಭತ್ತ ಬೆಳೆಯಲು ಎಕರೆಗೆ 30 ರಿಂದ 35ಸಾವಿರ ಹಣ ಖರ್ಚುಮಾಡಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆರಾಯ ತಣ್ಣೀರೆರೆಚಿದ್ದಾನೆ.
ಈ ವರ್ಷ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೆವು. ಆದರೆ, ಮಳೆಯಿಂದಾಗಿ ಖರ್ಚು ಹೆಚ್ಚಾಗಲಿದ್ದು, ಇಳುವರಿಯೂ ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯೂ ಸಿಗುವುದಿಲ್ಲ. ಇದನ್ನು ಮನಗಂಡು ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಿದರೆ ಅನುಕೂಲವಾಗಲಿದೆ ಎಂದು ತೆಕ್ಕಲಕೋಟೆಯ ರೈತರು ಅಳಲನ್ನು ತೋಡಿಕೊಂಡರು.
ಉಪಕೃಷಿ ನಿರ್ದೇಶಕ ಸಿ.ಆರ್.ಚಂದ್ರಶೇಖರ, ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್, ತೆಕ್ಕಲಕೋಟೆ ಕೃಷಿ ಅಧಿಕಾರಿ ಸೌಮ್ಯಾ, ರೈತರಾದ ವೀರೇಶ, ನಾಗರಾಜ, ಗಾಳಿ ಚಂದ್ರಶೇಖರ, ಮೌಲಾಸಾಬ್ ಇದ್ದರು.

Previous articleಮನೆ ಮನೆಗೆ ಲಸಿಕಾ ಮಿತ್ರ ಭೇಟಿ: ಕೋವಿಡ್ ಲಸಿಕೆ ನೀಡಿಕೆ
Next articleಕಮಲಮುಡಿದ ಎಸ್.ಕೃಷ್ಣ ನಾಯ್ಕ್

LEAVE A REPLY

Please enter your comment!
Please enter your name here