ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಾದ್ಯಂತ ಬುಧವಾರ ಮನೆ ಮನೆಗೆ ಲಸಿಕಾ ಮಿತ್ರರ ಭೇಟಿ ಮನೆ ಮನೆ ಸಮೀಕ್ಷೆಯೊಂದಿಗೆ ಕೋವಿಡ್ ಲಸಿಕಾ ವಿತರಣೆ ಹರ್ ಘರ್ ದಸ್ತಕ್ ವಿನೂತನ ಲಸಿಕಾ ಅಭಿಯಾನ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಶೇ.89ರಷ್ಟು ಕೋವಿಡ್ ಲಸಿಕೆ ಪಡೆದಿರುತ್ತಾರೆ. ಪ್ರಗತಿಯನ್ನು ತೀವ್ರಗತಿಯಲ್ಲಿ ಶೇ.100ರಷ್ಟು ಸಾಧಿಸಲು ಸರ್ಕಾರ ಹರ್ ಘರ್ ದಸ್ತಕ್ ಕಾರ್ಯಕ್ರಮ ರೂಪಿಸಿ ಮನೆ ಮನೆಗೆ ಲಸಿಕಾ ಮಿತ್ರರನ್ನು ಕಳುಹಿಸಿ ಲಸಿಕಾ ವಂಚಿತರಾದ ಕೃಷಿ, ಕೈಗಾರಿಕಾ ಇತರೆ ಕಾರ್ಮಿಕರು, ಲಸಿಕಾ ಸತ್ರಗಳಿಗೆ ಬರಲಾಗದ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಲಸಿಕಾ ಭಾಗ್ಯವನ್ನು ಅವರವರ ಮನೆಗೆ ಹೋಗಿ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.