ಮದ್ಯ ಸೇವಿಸಿದ ವ್ಯಕ್ತಿ ಚರಂಡಿಗೆ ಬಿದ್ದು ಸಾವು

0
442

ಮದ್ಯ ಸೇವಿಸಿದ ವ್ಯಕ್ತಿ ಚರಂಡಿಗೆ ಬಿದ್ದು ಸಾವು

ಬೆಳಗಾಯಿತು ವಾರ್ತೆ
ಕೊಟ್ಟೂರು: ತಾಲೂಕಿನ ಉಜ್ಜಿನಿ ಗ್ರಾಮದ ಶಿವಕುಮಾರ (41) ಎಂಬ ವ್ಯಕ್ತಿ ಮಧ್ಯ ಸೇವಿಸಿ ಕಾಲುಜಾರಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ಪಟ್ಟಣದ ಉಜ್ಜಿನಿ ರಸ್ತೆಯ ವಾಲ್ ಕಟ್ಟೆ ಬಳಿ ಬೆಳಗಿನ ಜಾವ 4:00 ಸುಮಾರಿಗೆ ಜರುಗಿದೆ.

ಮೃತಪಟ್ಟಿರುವ ಶಿವಕುಮಾರ್ ಅಂಗವಿಕಲ ನಾಗಿದ್ದು ಅತಿಯಾದ ಮದ್ಯ ಸೇವನೆಯಿಂದ ಎರಡು ಮೂತ್ರಪಿಂಡಗಳು ಹಾಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ ಕುಡಿಯುವುದನ್ನು ಬಿಡಲು ಸಾಕಷ್ಟು ಬಾರಿ ಮನೆಯವರು ಹೇಳಿದರು ಕೇಳದ ಈತನು ಸೋಮವಾರ ಉಜ್ಜಿನಿ ಗ್ರಾಮದಿಂದ ಕೊಟ್ಟೂರು ಪಟ್ಟಣಕ್ಕೆ ಬಂದು ಮದ್ಯ ಸೇವಿಸಿ ಗ್ರಾಮದ ಕಡೆ ತೆರಳದೆ ಬೆಳಗಿನ ಜಾವ ಮಳೆ ಬರುವ ಸಂದರ್ಭದಲ್ಲಿ ತಲೆಗೆ ಪ್ಲಾಸ್ಟಿಕ್ ಚೀಲ ಒದ್ದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಹೆಚ್. ನಾಗಪ್ಪ ಭೇಟಿ ನೀಡಿ ಪರಿಶೀಲಿಸಿದ್ದು ಮೃತಪಟ್ಟಿರುವ ವ್ಯಕ್ತಿಯು ಉಜ್ಜಿನಿ ಗ್ರಾಮದ‌ ಶಿಕ್ಷಕ ದಿವಂಗತ ಸೋಮಚಾರಿ ಮಗನೆಂದು ತಿಳಿದು ಬಂದಿದ್ದು ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous article“ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ”:ಇಂಧನ ಸಚಿವ ಸುನೀಲ್ ಕುಮಾರ್
Next articleಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್

LEAVE A REPLY

Please enter your comment!
Please enter your name here