ಮಕ್ಕಳಿಗೆ ಪುಷ್ಪ ಚೆಲ್ಲುವ ಮೂಲಕ ಶಾಲೆಗೆ ಸ್ವಾಗತ

0
260

ಕೊಟ್ಟೂರು: ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅನುಮತಿಯೊಂದಿಗೆ ರಾಜ್ಯಾದ್ಯಂತ ಪ್ರಾಥಮಿಕ ಪಾಠ ಶಾಲೆಗಳು ಆರಂಭವಾಗಿದ್ದು, 1 ರಿಂದ 5ನೇ ತರಗತಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಸಂತಸದಿಂದಲೇ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಸೋಮವಾರ ಗಮನಸೆಳೆದವು.
ಪಟ್ಟಣದ ಜೆಪಿನಗರದ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಸೇರಿದಂತೆ ಇತರೆ ಸರಕಾರಿ ಶಾಲೆಗಳಲ್ಲಿ ಎರಡು ದಿನಗಳ ಮುಂಚಿತವಾಗಿ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿಸಲಾಗಿದೆ ಶಿಕ್ಷಕರು ಶಾಲಾ ಆವರಣದಲ್ಲಿ ಬರುವ ಪುಟ್ಟ ಮಕ್ಕಳಿಗೆ ತರ್ಮಲ್ ಸ್ಕ್ಯಾನಿಂಗ್ ನಂತರ ಅವರಿಗೆ ಪುಷ್ಪ ಚೆಲ್ಲುವುದರ ಮುಖಾಂತರ ಮುಖ್ಯಗುರುಗಳಾದ ಅಜ್ಜಣ್ಣ ನಗುಮುಖದಲ್ಲೇ ಸ್ವಾಗತಿಸಿದ್ದಾರೆ.
ಎರಡು ವರ್ಷದ ಬಳಿಕ ಶಾಲೆಗಳು ಆರಂಭವಾಗುತ್ತಿರುವುದು ಮತ್ತು ಕರೊನಾ ಮೂರನೇ ಅಲೆ ಆತಂಕದ ನಡುವೆಯೂ ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದ ದೃಶ್ಯವನ್ನ ಸ್ಥಳೀಯ ನಿವಾಸಿಗಳು ಮತ್ತು ಮಕ್ಕಳ ಪೋಷಕರು ಕಣ್ಣುಂಬಿಕೊಂಡು ಸಂತಸದಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಗೌರಮ್ಮ, ಗಗಂಮ್ಮ, ಕೆ.ಶಾರದ, ಮಕ್ಕಳ ಪೋಷಕರು ಮುಂತಾದವರು ಇದ್ದರು.
ಫೋಟೋ ವಿವರ: ಪಟ್ಟಣದ ಜೆಪಿ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಶಿಕ್ಷಕರು ಸ್ವಾಗತಿಸಿದರು.

Previous articleಕೊಟ್ಟೂರಿಗೆ ರವಿ ಡಿ ಚನ್ನಣ್ಣನವರ ಆಗಮನ ಸ್ಪರ್ದಾತ್ಮಕ ಪರೀಕ್ಷೆ ಕುರಿತು ದಿಕ್ಸೂಚಿ ಭಾಷಣ
Next article“ಹಾನಗಲ್​​ನಲ್ಲಿ ಬಿ.ಜೆ.ಪಿ ಪರವಾಗಿ ಸಾಮಾಜಿಕ ಸಮೀಕರಣದ ಒಲವು ಕಾಣುತ್ತಿದೆ”:ಸಿಎಂ

LEAVE A REPLY

Please enter your comment!
Please enter your name here