ಮಕ್ಕಳಲ್ಲಿ ಹೆಚ್ಚಾದ ಕೆಮ್ಮು, ನೆಗಡಿ , ಜ್ವರ : ಪೋಷಕರಲ್ಲಿ ಆತಂಕ

0
178

ಕೊಟ್ಟೂರು: ಕೊರೋನಾ ಸೋಂಕು ಕೊಂಚ ಕಡಿಮೆಯಾದ ಬಳಿಕ ನಿಟ್ಟುಸಿರು  ಬಿಟ್ಟಿದ್ದ ಜನರಿಗೆ ಮತ್ತೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕೆಮ್ಮು, ನೆಗಡಿ, ಜ್ವರ ದಿನೇದಿನೇ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ  ಖಾಸಗಿ ಆಸ್ಪತ್ರೆಗಳ ಕಡೆ ಜನರು ಮುಖಮಾಡಿದ್ದು ಎಲ್ಲರಲ್ಲೂ ಆರೋಗ್ಯ ರಕ್ಷಿಸಿಕೊಳ್ಳುವ ಬಗೆ ಹೇಗೆಂಬ ಪ್ರಶ್ನೆ ಕಾಡತೊಡಗಿದೆ.
ಕಳೆದ ಒಂದು ತಿಂಗಳಿನಿಂದ ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳ ಜನರಲ್ಲಿ ಶೀತ, ಕಫ,ಕೆಮ್ಮು, ಜ್ವರದ ಲಕ್ಷಣಗಳು ಉಲ್ಬಣಗೊಂಡು ಆಸ್ಪತ್ರೆಗೆ ಸೇರುತ್ತಿರುವ ಸಂಖ್ಯೆ ಹೆಚ್ಚಾಗಿದ್ದು ಮಳೆಗಾಲ ಮತ್ತು ಚಳಿಗಾಲದಲ್ಲಿ ಮಕ್ಕಳು ಸಹಜವಾಗಿ ಸಾಮಾನ್ಯ ರೋಗಗಳಿಂದ ಬಳಲುತ್ತಾರೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಕೊಟ್ಟೂರು ಪಟ್ಟಣ ತಾಲೂಕು ಕೇಂದ್ರವಾಗಿ ಮೂರು ವರ್ಷ ಕಳೆದರೂ  ಈ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಇಲ್ಲದ ಕಾರಣ ಕೂಲಿಕಾರ್ಮಿಕರು ಮತ್ತು ಮಧ್ಯಮ ವರ್ಗಗಳ ಪೋಷಕರು ತಮ್ಮ ಮಕ್ಕಳನ್ನು  ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು. ಒಂದು ದಿನದ ದುಡಿಮೆ ಹಣ ಮಕ್ಕಳ ಚಿಕಿತ್ಸೆಗಾಗಿ ನೀಡಿ ದಿಕ್ಕುತೋಚದ ಸ್ಥಿತಿಯಲ್ಲಿ ಪೋಷಕರು ಯಾತನೆ ಅನುಭವಿಸುತ್ತಿದ್ದಾರೆ.

Previous articleಕೋವಿಡ್: 20 ಲಕ್ಷದ ಗಡಿದಾಡಿತು ಸಕ್ರಿಯ ಪ್ರಕರಣಗಳ ಸಂಖ್ಯೆ..
Next article“ಅಂಗವಿಕಲತೆ ಶಾಪವಲ್ಲ ಅದೊಂದು ನೂನ್ಯತೆ”.

LEAVE A REPLY

Please enter your comment!
Please enter your name here