7.3 C
New York
Monday, December 5, 2022

Buy now

spot_img

“ಭಾರತ್ ಜೋಡೋ ಯಾತ್ರೆ – ಅಲ್ಲಲ್ಲಿ ಹತ್ತೋದು ಇಳಿಯೋದು ಜೋಡಿಸೋದೇ ಇವರ ಯಾತ್ರೆ”: ಸಚಿವ ವಿ. ಸೋಮಣ್ಣ

ಬೆಂಗಳೂರು: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯನ್ನ ನನ್ನ ಉಸ್ತುವಾರಿ ಜಿಲ್ಲೆಯಿಂದಲೇ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆ ಪಾದಯಾತ್ರೆ ಅನ್ಕೊಂಡಿದ್ದೆ. ಆದ್ರೆ ಇದು ಪಾದಯಾತ್ರೆ ಅಲ್ಲ. ಅಲ್ಲಲ್ಲಿ ಹತ್ತೋದು ಇಳಿಯೋದು ಜೋಡಿಸೋದೇ ಇವರ ಯಾತ್ರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಯನ್ನ ಗುಂಡ್ಲುಪೇಟೆಯಿAದ ಆರಂಭ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆ ಮಾಡಿದ್ದು ಜೆ. ಎಚ್. ಪಟೇಲರು. ನಂತರ ಬಂದ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಏನ್ ಮಾಡಿದೆ? ಏನ್ ಮಾಡಿಲ್ಲ ಅಂತ ಚರ್ಚೆಗೆ ಬರಲಿ. ಜಿಲ್ಲೆಗೆ ನಾವು ೨೩ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ವಿ. ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದಾಗ ಕೆರೆಗಳಿಗೆ ನೀರು ತುಂಬಿಸಲು ೧೧೦ ಕೋಟಿ ಕೊಟ್ಟಿದ್ವಿ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ಬಿಜೆಪಿ. ೨೦೧೨-೧೩ ರಲ್ಲಿ ಚಾಮರಾಜನಗರ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದು ಬಿಜೆಪಿ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,593FollowersFollow
0SubscribersSubscribe
- Advertisement -spot_img

Latest Articles