ಸಿರುಗುಪ್ಪ: ತಾಲೂಕಿನ ನಿಟ್ಟೂರು ಗ್ರಾಮದಿಂದ ಸಿಂಧನೂರು ತಾಲೂಕಿನ ಕೊನೆಭಾಗದ ಗ್ರಾಮವಾದ ಸಿಂಗಾಪುರ ಗ್ರಾಮದ ಸಂಪರ್ಕಕ್ಕಾಗಿ ಬಹುನಿರೀಕ್ಷಿತ ಸೇತುವೆಯ ಕಾಮಗಾರಿಯ ಕಡತ ಮೂಲೆಗುಂಪಾಗಿದAತಾಗಿದೆ.
ಸೇತುವೆ ನಿರ್ಮಾಣಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಮತ್ತು ಶಾಸಕ ಎಂ.ಎಸ್.ಸೋಮಲಿAಗಪ್ಪ ಅವರು ಅನುದಾನ ಬಿಡುಗಡೆಗೆ ಶ್ರಮಿಸಿ ಶಂಕುಸ್ಥಾಪನೆ ಮಾಡಿ ಹಲವು ವರ್ಷಗಳೇ ಕಳೆದರೂ ಕೋವಿಡ್ ನೆಪವೊಡ್ಡಿ ಕಾಮಗಾರಿ ವಿಳಂಬದ ಮಾಡುತ್ತಿರುವುದರಿಂದ ಸೇತುವೆ ನಿರ್ಮಾಣವಾಗುವುದೋ ಇಲ್ಲವೋ ಎಂಬುದು ಇಲ್ಲಿನ ಹಲವು ಗ್ರಾಮಸ್ಥರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೇತುವೆ ನಿರ್ಮಾಣವೇ ನನ್ನ ಗುರಿಯಾಗಿದೆಂದು ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದ ಶಾಸಕರ ಗುರಿ ಶಂಕುಸ್ಥಾಪನೆಗೆ ಸೀಮಿತವಾಯಿತಾ? ಎನ್ನುವುದು ಇಲ್ಲಿನ ಜನಸಾಮಾನ್ಯರ ಪ್ರಶ್ನೆಯಾಗಿದೆ.