ಮರಿಯಮ್ಮನಹಳ್ಳಿ: ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಬಹುತೇಕ ಸ್ಥಗಿತಗೊಂಡಿದ್ದ ಶಾಲೆ– ಕಾಲೇಜುಗಳು ಆ.23ರಿಂದ ಆರಂಭವಾಗಲಿದ್ದು, 9ನೇ, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆಯಲಿವೆ. ಇದಕ್ಕಾಗಿ ಪಟ್ಟಣದ ಶಿಕ್ಷಣ ಸಂಸ್ಥೆಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಪಟ್ಟಣದ ಸರ್ಕಾರಿ ಪ್ರೌಢಶಾಲೆ,ಸ.ಪ.ಪೂ.ಕಾಲೇಜು, ಪ್ರಿಯದರ್ಶಿನಿ ಪ್ರೌಢಶಾಲೆ,ಕಾಲೇಜು,ಶ್ರೀ ಸಾಯಿ ಪ್ರಾಥಮಿಕ, ಪ್ರೌಢಶಾಲೆ, ಪ್ರಾರ್ಥನಾ, ಶ್ರೀ ವಿನಾಯಕ,ಮುರಾರ್ಜಿ ದೇಸಾಯಿ ವಸತಿ ಶಾಲಾ ಕಾಲೇಜುಗಳಿಗೆ ಸ್ಯಾನಿ ಟೈಸ್ ಮಾಡಿದ್ದು, ಎಲ್ಲ ಕೊಠಡಿಗಳನ್ನು ಸ್ವಚ್ಛ ಗೊಳಿಸಲಾಗಿದೆ. “ಶಾಲೆಯ ಕೋವಿಡ್ ಮಾರ್ಗಸೂಚಿಗಳನ್ವಯ ಎಲ್ಲಾ ಕೋಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಒಂದೊಂದು ಕೋಣೆಯಲ್ಲಿ ಇಪ್ಪತ್ತು ವಿಧ್ಯಾರ್ಥಿಗಳಂತೆ, ಒಂದು ಬೆಂಚಿಗೆ ಒಬ್ಬರು ಕೂಡುವಂತೆ ವ್ಯವಸ್ಥೆ ಮಾಡಲಾಗಿದೆ. ವಿಧ್ಯಾರ್ಥಿಗಳು ಭಯ ಪಡದೆ ಶಾಲೆಗೆ ಬರಬೇಕು” .- ಭೀಮನಾಯ್ಕ. ಮು.ಗು.ಪ್ರಾರ್ಥನಾ ಪ್ರೌಢ ಶಾಲೆ.
