9 C
New York
Tuesday, October 4, 2022

Buy now

spot_img

ಬ್ರಿಟನ್ ರಾಣಿ ಎಲಿಜಬೆತ್ 2 ನಿಧನ

ಬ್ರಿಟನ್‌ನ ದೀರ್ಘಕಾಲದವರೆಗೆ ರಾಣಿಯಾಗಿದ್ದ ಕ್ವೀನ್ ಎಲಿಜಬೆತ್ 2 ತನ್ನ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸುಮಾರು 70 ವರ್ಷಗಳ ಕಾಲ ಬ್ರಿಟನ್ ರಾಣಿಯಾಗಿ ಸೇವೆ ಸಲ್ಲಿಸಿದ್ದರು. ಗುರುವಾರ ( ಸೆಪೆಂಬರ್ 8) ಎಲಿಜಬೆತ್ 2 ಅವರ ಅನಾರೋಗ್ಯದ ತೀರಾ ಹದಗೆಟ್ಟಿತ್ತು. ಈ ಸಂಬಂಧ ವೈದ್ಯರು ರಾಣಿ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಕ್ವೀನ್ ಎಲಿಜಬೆತ್ 2 ಆರೋಗ್ಯ ಹದಗೆಟ್ಟಿರೋ ವಿಷಯ ತಿಳಿಯುತ್ತಿದ್ದಂತೆ ಸ್ಕಾಟಿಶ್ ಎಸ್ಟೇಟ್‌ನಲ್ಲಿ ರಾಣಿ ಕುಟಂಬ ಸೇರಿಕೊಂಡಿತ್ತು. ವೈದ್ಯರು ಅದೆಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಿಸದೆ ರಾಣಿ ಎಲಿಜಬೆತ್ ಕೊನೆಯುಸಿರೆಳಿದ್ದಾರೆ. ಈ ವಿಷಯವನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದು, ” ರಾಣಿ ಬಲ್‌ಮೊರಲ್‌ನಲ್ಲಿ ನೋವಿಲ್ಲದೆ ಕೊನೆಯುಸಿರೆಳೆದಿದ್ದಾರೆ”

1952ರಲ್ಲಿ ಕ್ವೀನ್ ಎಲಿಜಬೆತ್ ಅಧಿಕಾರ ವಹಿಸಿಕೊಂಡಿದ್ದರು. ಸುಮಾರು 73 ವರ್ಷಗಳ ಕಾಲ ಬ್ರಿಟನ್ ರಾಣಿಯಾಗಿ ಸಮಾಜ ಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದರು. ಎಲಿಜಬೆತ್ 2 ನಿಧನದ ಬೆನ್ನಲ್ಲೆ ಬ್ರಿಟನ್ 10 ದಿನಗಳ ಕಾಲ ಶೋಕ ಘೋಷಿಸಿದೆ. ಸದ್ಯ ಕ್ವೀನ್ ಎಲಿಜಬೆತ್ 2 ಮೃತ ದೇಹ ಬೆಲ್‌ಮೊರಲ್‌ನಲ್ಲಿಸ ಇಡಲಾಗಿದ್ದು, ನಾಳೆ (ಸೆಪ್ಟೆಂಬರ್ 9) ಲಂಡನ್‌ಗೆ ತೆಗೆದುಕೊಂಡು ಹೋಗಲಾಗುತ್ತೆ ಎಂದು ಹೇಳಿದೆ.

ಬ್ರಿಟನ್ ರಾಣಿ ಎಲಿಜಬೆತ್ 2 ನಿಧನದಿಂದ ವಿಶ್ವದ ಗಣ್ಯಾತೀಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, ರಾಣಿ ಎಲಿಜಬೆತ್ 2 ಅವರನ್ನು 2015 ಹಾಗೂ 2018ರಲ್ಲಿ ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.

ರಾಣಿ ಎಲಿಜಬೆತ್ 2 ಅವರ ಜೀವ ಚರಿತ್ರೆಯ ಮೇಲೆ ಹಲವು ಸಿನಿಮಾಗಳನ್ನು ಮಾಡಲಾಗಿದೆ. ಕೆಲವು ಡಾಕ್ಯೂಮೆಂಟರಿಗಳಾಗಿವೆ. 2001ರಲ್ಲಿ ‘ಹರ್ ಮೆಜೆಸ್ಟಿ’ ಅನ್ನೋ ಸಿನಿಮಾ ತೆರೆಕಂಡಿತ್ತು. 1988ರಲ್ಲಿ ‘ದಿ ನೆಕೆಡ್ ಗನ್: ಫ್ರಮ್ ದಿ ಫೈಲ್ಸ್ ಆಫ್ ಪೊಲೀಸ್ ಗನ್’ ಅನ್ನೋ ಕ್ರೈಂ ಕಾಮಿಡಿ ಸಿನಿಮಾ ಬಿಡುಗಡೆಯಾಗಿತ್ತು. ಇದರಲ್ಲಿ ಕ್ವೀನ್ ಎಲಿಜಬೆತ್ 2 ಲಾಸ್ ಎಂಜಲೀಸ್ ರಕ್ಷಣೆ ನೀಡುವ ಸನ್ನಿವೇಶವನ್ನು ಚಿತ್ರಿಸಲಾಗಿತ್ತು. 2006ರಲ್ಲಿ ‘ದಿ ಕ್ವೀನ್’ಅನ್ನೋ ಹೆಸರಿನಲ್ಲೇ ಸಿನಿಮಾ ಬಿಡುಗಡೆಯಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,510FollowersFollow
0SubscribersSubscribe
- Advertisement -spot_img

Latest Articles