27.9 C
New York
Friday, July 30, 2021

Buy now

spot_img

ಬಿಜೆಪಿ ಅಧಿಕಾರಕ್ಕೆ ಬರಲು ವಿಶ್ವನಾಥ್ ಸೇರಿದಂತೆ 17ಜನ ಕಾರಣ: ಸಚಿವ ಈಶ್ವರಪ್ಪ

ಬಳ್ಳಾರಿ:ವಿಶ್ವನಾಥ್ ಅವರು ಸಹ ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರಲು ವಿಶ್ವನಾಥ್ ಸೇರಿದಂತೆ 17ಜನ ಕಾರಣ ಅದನ್ನು ನಾವು ಅಲ್ಲಗೆಳೆಯುವಂತಿಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರಪ್ಪ ಪ್ರತಿಪಾಧಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ನನಗೇ ಭಿಕ್ಷೆ ಕೊಟ್ಟಿಲ್ಲ ಎಂಬ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಷಕ್ಷದ ಮುಖಾಂತರ ದೇಶ ಮತ್ತು ರಾಜ್ಯ ಬೆಳೆಯುತ್ತೇ ಎನ್ನುವ ಅಭಿಪ್ರಾಯದಲ್ಲಿ ದೇಶದ ಜನರಿದ್ದಾರೆ
ವಿಶ್ವನಾಥ್ ಅವರು ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರಲು ವಿಶ್ವನಾಥ್ ಸೇರಿದಂತೆ 17ಜನ ಕಾರಣ ಅದನ್ನು ಅಲ್ಲಗೆಳೆಯುವಂತಿಲ್ಲ.

ಕೇಂದ್ರದಿಂದ ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರು ಮೂರು ದಿನಗಳ ಕಾಲ ರಾಜ್ಯಕ್ಕೆ ಆಗಮಿಸಿ ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಅವರೊಂದಿಗೆ ಚರ್ಚಿಸಿದ ನಂತರ ಯಡಿಯೂರಪ್ಪ ನವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದು ವರಿಯಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕುರಿತು ವಿಚಾರ ಮಾಡುವುದು ಸೂಕ್ತವಲ್ಲ ಎಂದರು.

ವಿಶ್ವನಾಥ್, ರೇಣುಕಾಚಾರ್ಯ,ಯೋಗೇಶ್ವರ್, ಬೆಲ್ಲದ್, ಹಾಗೂ ಯತ್ನಾಳ್, ಸೇರಿದಂತೆ ಎಲ್ಲಾರು ಭಾರತೀಯ ಜನತಾ ಪಾರ್ಟಿ ಬಿಟ್ಟೂ ಹೋಗುವವರೇನೂ ಅಲ್ಲ ನಿಮ್ಮಲ್ಲಿ ಪ್ರಾರ್ಥಿಸುವುದು ಒಂದೇ ಪಕ್ಷದಲ್ಲಿ ಸಣ್ಣ ಪುಟ್ಪ ಗೊಂದಲಗಳಿವೆ, ಸಮಧಾನ ಇಲ್ಲ ಎಂದು ಹೇಳುತ್ತಾ ಬಂದಿದ್ದೀರಿ ನಿಮ್ಮಂಥೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಯಾರೋ ಹೇಳಿಕೆ ನೀಡದೆ ಖಾಸಗಿಯಾಗಿ ಅರುಣ್ ಸಿಂಗ್ ಹತ್ತಿರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ವಿಶ್ವನಾಥ್ ಅವರೇ ನೀವೂ ಬಿಜೆಪಿ ಯವರೇ ದಯವಿಟ್ಟು ನೆನಪಿಟ್ಟುಕೊಳ್ಳಿ ಪಕ್ಷ ಬಿಟ್ಟು ಹೋಗುವ ಯೋಚನೆ ಮಾಡಬೇಡಿ ನೀವೂ ಸೇರಿದಂತೆ 17ಜನ ಶಾಸಕರು ಕಾಂಗ್ರೆ‌ಸ್ ಮತ್ತು ಜೆಡಿಎಸ್ ಪಕ್ಷ ಬಿಟ್ಟು ಬಂದ ನಿಮ್ಮ ಮುಖಾಂತರ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಇದರಲ್ಲಿ ಯಾವ ಅನುಮಾನ ಇಲ್ಲ ಇಂದಿನ ವರೆಗೂ ಅಸಮಧಾನ ಹೊರಹಾಕಿದ್ದೀರಿ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದೀರಿ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ನಿಮ್ಮ ಅಸಮಧಾನ ಹಂಚಿಕೊಂಡಿದ್ದೀರಿ ಸಾಕು ಇನ್ನೂ ಗೊಂದಲಗಳನ್ನು ಮುಂದುವರೆ‌ಸಬೇಡಿ ಎಂದರು….

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮಲಿಂಗಪ್ಪ, ಯುವ ಮುಖಂಡರಾದ ಮಧು ,ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,875FollowersFollow
0SubscribersSubscribe
- Advertisement -spot_img

Latest Articles