ಬಾಂಗ್ಲಾದೇಶಕ್ಕೆ ಆಕ್ಸಿಜನ್ ಕಂಟೈರ‍್ಸ್ಗಳನ್ನು ಪೂರೈಕೆ ಮಾಡಿದ ಭಾರತ..

  0
  90

  ಬಾಂಗ್ಲಾದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿನಂದಕ್ಕೆ ಏರಿಕೆ ಕಂಡುಕೊಳ್ಳುತ್ತಿರುವ ಕಾರಣದಿಂದಾಗಿ ಭಾರತವು ಬಾಂಗ್ಲಾದೇಶಕ್ಕೆ ಆಕ್ಸಿಜನ್ ಕಂಟೈರ‍್ಸ್ಗಳನ್ನು ಪೂರೈಕೆ ಮಾಡಲು ಮುಂದಾಗಿದೆ. ಈಗಾಗಲೆ ಬಾಂಗ್ಲಾದೇಶಕ್ಕೆ ಭಾರತದಿಂದ 10 ಆಕ್ಸಿಜನ್ ಕಂಟೈರ‍್ಸ್ಗಳನ್ನು ಪೂರೈಕೆ ಮಾಡಲಾಗಿದೆ. ಈ ಹಿಂದೆಯೂ ಸಹ, ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ನಮ್ಮ ಸ್ವದೇಶಿ ಲಸಿಕೆಗಳನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ರವಾನಿಸಲಾಗಿತ್ತು. ಅಲ್ಲದೆ, ಕೆಲವು ತಿಂಗಳ ಹಿಂದೆಯಷ್ಟೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ, ಭಾರತ ಮತ್ತು ಬಂಗ್ಲಾದೇಶ –ಈ ಎರಡು ರಾಷ್ಟçಗಳು ಜಗತ್ತಿನಲ್ಲಿ ಅಸ್ಥಿರತೆ, ದ್ವೇಷ, ಅಸೂಯೆಯ ಬದಲಾಗಿ ಸ್ಥಿರತೆ, ಪ್ರೀತಿ ಹಾಗು ಶಾಂತಿಯನ್ನು ನೋಡಲು ಬಯಸುತ್ತವೆ. ಈ ಎರಡು ದೇಶಗಳು ತಮ್ಮ ಪ್ರಗತಿಯ ಮೂಲಕ ಜಗತ್ತಿನ ಪ್ರಗತಿಯನ್ನು ಕಾಣಲು ಬಯಸುತ್ತವೆ. ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಈ ಎರಡು ದೇಶಗಳು ತಮ್ಮ ಸಾಮರ್ಥ್ಯವೇನೆಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿವೆ. ಇವತ್ತು ಈ ಎರಡು ದೇಶಗಳು ಕೋವಿಡ್-19 ವಿರುದ್ಧ ಪರಾಕ್ರಮದಿಂದ ಹೋರಾಡುತ್ತಿವೆ. ಭಾರತವು ತನ್ನ ಸ್ವದೇಶಿ ‘ಮೇಡ್ ಇನ್ ಇಂಡಿಯಾ’ ಕೋವಿಡ್-19 ತಡೆಗಟ್ಟುವ ಲಸಿಕೆಗಳನ್ನು ಬಾಂಗ್ಲಾದೇಶದ ಜನತೆಗೆ ತಲುಪಿಸುವ ಮೂಲಕ ತನ್ನ ಕಾರ್ಯತತ್ಪರತೆಯನ್ನು ಮೆರೆದಿದೆ ಎಂಬುದಿತ್ಯಾದಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸೌಹಾರ್ದ ಸಂಬAಧವನ್ನು ಅನಾವರಣ ಮಾಡಿದ್ದರು.

  Previous articleಹಸಿರುಮನೆ(ಗ್ರೀನ್‌ಹೌಸ್) ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಜಿ20 ದೇಶಗಳಿಗೆ ಕರೆ ನೀಡಿದ ಭಾರತ..
  Next articleಸಚಿವ ಕೆ.ಎಸ್ ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ

  LEAVE A REPLY

  Please enter your comment!
  Please enter your name here