ಬಡ ಜನರ ಸೇವೆಯಲ್ಲಿಯೇ ದೇವರ ಕಾಣಿ ಎಂದರು ವಿವೇಕಾನಂದರು

  0
  289

  ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ ಮೈಯೆಲ್ಲಾ ಪುಳಕಗೊಳ್ಳುತ್ತದೆ, “ಏಳಿ, ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ” ಎಂಬ ಮಾತುಗಳು ಈಗಲೂ ಪ್ರಸ್ತುತವಾಗಿದೆ, ಭಾರತ ಕಂಡ ಹೆಮ್ಮೆಯ ಪುತ್ರರಿವರು, ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ ಸಂದೇಶಗಳು ಎಂದೆAದಿಗೂ ಪ್ರಸ್ತುತ, ವಿವೇಕಾನಂದರು ಯುವಕರಿಗೆ ಮಾದರಿ ಎಂದು ಗಣಿತಶಾಸ್ತçದ ಉಪನ್ಯಾಸಕರಾದ ಲೋಕೇಶ್‌ರವರು ತಿಳಿಸಿದರು.

  ಅವರು ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಕೆಜೆವಿಸ್, ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

  ಅವರ ಆದರ್ಶಗಳನ್ನ ಯುವ ಜನಾಂಗಕ್ಕೆ ತಲುಪಿಬೇಕು, ಸ್ವಾಮಿ ವಿವೇಕಾನಂದರ ವಿಚಾರದಲ್ಲಿ ಯಾವುದೇ ರಾಜಕೀಯ ಸಲ್ಲದು, ಅವರು ಯೋಚನೆಗಳು ಪ್ರಪಂಚದ ಜನರ ಮೆಚ್ಚಿಗೆ ಗಳಿಸಿವೆ, ಅವರ ಎಲ್ಲಾ ಒಳ್ಳೆಯ ಸಿದ್ಧಾಂತಗಳನ್ನ ನೆನಪಿಸಿಕೊಂಡು ಆಚರಣೆಗೆ ತರಬೇಕು, ಭಾರತೀಯರಾದ ನಮಗೆ ಭಾರತೀಯರೆಲ್ಲರು ಸಹೋದರರು ಎಂದು ಹೇಳಿ ಎಂದು ಸಂದೇಶ ನೀಡಿ ಹೋಗಿದ್ದಾರೆ, ಚಿಕಾಗೋದಲ್ಲಿ ಭಗವದ್ಗೀತೆಯನ್ನು ಕೆಳಗಿಟ್ಟು ತಮ್ಮ ಧರ್ಮ ಶ್ರೇಷ್ಠ ಎಂಬ ಮೊಂಡು ವಾದಕ್ಕೆ, ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕವನ್ನು ಕುರಿತು ಎಲ್ಲಾ ಧರ್ಮಗಳಿಗಿಂತ ಮೂಲ ಧರ್ಮ ನಮ್ಮ ಧರ್ಮ, ಎಲ್ಲಾ ಧರ್ಮ ಒಂದೇ ಎಂದರು.

  Previous article“ಸ್ವಚ್ಛ, ಜನಪರ ಆಡಳಿತ ಕೆ.ಆರ್.ಎಸ್ ಪಕ್ಷದಿಂದ ಸಾಧ್ಯ.”
  Next articleಭರವಸೆಗಷ್ಟೆ ಸೀಮಿತವಾದ ಸೇತುವೆ ಕಾಮಗಾರಿ

  LEAVE A REPLY

  Please enter your comment!
  Please enter your name here