ಮರಿಯಮ್ಮನಹಳ್ಳಿ: ಪಟ್ಟಣ ಪಂಚಾಯತಿಗೆ ಸಾಕಷ್ಟು ಏಳು-ಬೀಳುಗಳು,ಪರಸ್ಪರ ಪೈಪೋಟಿಯ ಚುನಾವಣೆಯಿಂದ ಪಟ್ಟಣ ಪಂಚಾಯತಿಗೆ ನೂತನ ಸಾರಥಿಗಳು ಆಯ್ಕೆ ಯಾಗಿದ್ದಾರೆ.ಆಯ್ಕೆಯಾದವರಿಗೆ ಸಾಕಷ್ಟು ಹಳೆಯ ಸಮಸ್ಯೆಗಳು ಸವಾಲುಗಳಾಗಿ ಎದುರಾಗಲಿವೆ.ಅಧಿಕಾರದ ಗದ್ದುಗೆ ಏರಲಿರುವ ನೂತನ ಸದಸ್ಯರು,ಕುಂಠಿತಗೊಂಡ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಪರಿಹರಿಸುತ್ತಾರೆಂಬುದು ಜನರಿಗೆ ಕುತೂಹಲ ಮೂಡಿಸಿದೆ.ಹರಿಬಿ ಹಾವು ಬಿಡದಿರಲಿ ನೂತನ ಸದಸ್ಯರು,
ಬಾಯಿಮಾತಿನ ಭರವಸೆಗಳಾಗದಿರಲಿ ಎಂಬುದು ಜನತೆಯ ಆಶಾಭಾವನೆ,ಜನರು ಅಭಿವೃಧ್ಧಿಗಾಗಿ ಕಾಯುತ್ತಿದ್ದಾರೆ ವಾರ್ಡ್‍ನ ಮತದಾರರು .ಪ.ಪಂ. ಸದಸ್ಯರಾಗಲು 18ವಾರ್ಡ್‍ಗಳಲ್ಲಿ 51 ಅಭ್ಯರ್ಥಿಗಳು ಡಿ.27ರಂದು ನಡೆದ ಚುನಾವಣೆಯಲ್ಲಿ ಸ್ಫರ್ಥಿಸಿದ್ದು 18 ವಾರ್ಡ್‍ನ ಮತದಾರರ ಮುಂದೆ ಅಭಿವೃಧ್ಧಿ ಪಥದತ್ತ ಕೊಂಡೊಯ್ಯುವ ಭರವಸೆಗಳನ್ನು ನೀಡಿದ್ದರು. ಮತದಾರ ಮಣೆ ಹಾಕಿದ ನೂತನ  ಸದಸ್ಯರ ಹಣೆ ಬರಹ ಡಿ30ರಂದು ಬಯಲಾಗಿದ್ದು , ಕೈ ಕಮಲ ಪಾಳಯದ ಅಭ್ಯರ್ಥಿಗಳು 18ವಾರ್ಡ್‍ಗಳ ಸದಸ್ಯರು ಗದ್ದುಗೆಗೆ ಏರಿದ್ದು ಪಟ್ಟಣದ ಅಭಿವೃಧ್ಧಿಗಾಗಿ ಆಡಿದ ಮಾತುಗಳು ಹರಿಬಿ ಹಾವುಗಳಾಗದೇ ಕೆಲಸ ಮಾಡಿ ತೋರಿಸಲಿ ಎಂಬ ಮಾತುಗಳು ವಾರ್ಡ್‍ನ ಮತದಾರರು ಮಾತನಾಡುತ್ತಿದ್ದಾರೆ.

Previous articleಪರಿಸರ ಪ್ರೇಮಿಯ ಸೈಕಲ್‌ಯಾನ
Next articleಆರೋಗ್ಯವಂತ ಮಕ್ಕಳು ದೇಶದ ಸಂಪತ್ತು

LEAVE A REPLY

Please enter your comment!
Please enter your name here