ಪ್ಯಾರಾ ಶೂಟಿಂಗ್ ವಿಶ್ವಕಪ್‌: ವಿಶ್ವ ದಾಖಲೆ ಮಾಡಿದ ಭಾರತದ ಅವನಿ ಲೆಖರಾ

0
105

ಫ್ರಾನ್ಸ್‌ನ ಚಟೇರೊದಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ಈವೆಂಟ್‌ನಲ್ಲಿ ಭಾರತದ ಅವನಿ ಲೆಖರಾ ವಿಶ್ವದಾಖಲೆ ಮಾಡಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ ಚಾಂಪಿಯನ್ ಅವನಿ ಲೆಖರಾ ಮಂಗಳವಾರ ನಡೆದ ಈವೆಂಟ್‌ನಲ್ಲಿ 250.6 ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ರ‍್ಹತೆ ಪಡೆಯಲು ಇಪ್ಪತ್ತು ರ‍್ಷದ ಅವನಿ ತನ್ನದೇ ಆದ 249.6 ರ ವಿಶ್ವ ದಾಖಲೆಯನ್ನು ಮುರಿದರು. ಪೋಲೆಂಡ್‌ನ ಎಮಿಲಿಯಾ ಬಾಬ್ಸ್ಕಾ 247.6 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, 225.6 ಅಂಕ ಗಳಿಸಿದ ಸ್ವೀಡನ್‌ನ ಅನ್ನಾ ನರ‍್ಮನ್ ಕಂಚಿನ ಪದಕ ಪಡೆದರು.

ರೈಫಲ್ ಈವೆಂಟ್‌ಗಳ SH1 ವಿಭಾಗದಲ್ಲಿ, ವಿಕಲಚೇತನ ಹೊಂದಿರುವ ಶೂಟರ್‌ಗಳು ಭಾಗವಹಿಸುತ್ತಾರೆ. ಅವರ ಕೋಚ್ ಮತ್ತು ಸಹಾಯಕರಿಗೆ ಆರಂಭದಲ್ಲಿ ವೀಸಾ ನಿರಾಕರಿಸಿದ್ದರಿಂದ ಅವನಿ ಪಂದ್ಯಾವಳಿಯಿಂದ ಹೊರಗುಳಿಯುವ ಅಂಚಿನಲ್ಲಿದ್ದರು. ಆದರೆ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯದ ಮಧ್ಯಪ್ರವೇಶದ ನಂತರ ಸಮಸ್ಯೆಯನ್ನು ಬಗೆಹರಿಸಲಾಯಿತು. ಚಿನ್ನದ ಪದಕ ಗೆದ್ದಿರುವ ಅವನಿ ಲೇಖರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ನೀವು ಯಾವಾಗಲೂ ಹೊಸ ಎತ್ತರಗಳನ್ನು ಮುಟ್ಟಲಿ ಮತ್ತು ಇತರರಿಗೆ ಸ್ಫರ‍್ತಿ ನೀಡುತ್ತಿರಲಿ ಎಂದು ಹಾರೈಸಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಚಿನ್ನ ಗೆದ್ದ ಉಭಯ ಆಟಗಾರರನ್ನು ಅಭಿನಂದಿಸಿದ್ದಾರೆ.

Previous articleನಯನತಾರಾ- ವಿವಾಹಕ್ಕೆ ಆಗಮಿಸುವ ಅತಿಥಿ ಪಟ್ಟಿ
Next articleಪೌರ ಕಾರ್ಮಿಕರು ಹಾಗೂ ಹೋರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಆಗ್ರಹಿಸಿ ಜುಲೈ 21ರಿಂದ ಅನಿರ್ದಿಷ್ಟ ಧರಣಿ.

LEAVE A REPLY

Please enter your comment!
Please enter your name here