ಚಿತ್ರದುರ್ಗ: ಕೇಂದ್ರ ಸರ್ಕಾರದಿಂದ ರೈತರಿಗೆ ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಆರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಜಮೆ ಆಗುತ್ತಿದೆ.
ಈ ಸಂಬAಧ ಆರ್ಹ ಫಲಾನುಭವಿಗಳಿಗೆ ಕಡ್ಡಾಯವಾಗಿ ಇ-ಕೆ.ವೈ.ಸಿ ಮಾಡಿಕೊಳ್ಳಲು ಕೃಷಿ ಇಲಾಖೆ ಸಮಸ್ತ ರೈತಭಾಂದವರಲಿ ್ಲಕೋರಲಾಗಿದೆ.
ಪ್ರತಿಯೊಬ್ಬ ರೈತ ಫಲಾನುಭವಿಯು http://pmkisan.gov.inWebsite ಗೆ ಬೇಟಿ ನೀಡಿ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ ಉಚಿತವಾಗಿ ಇ-ಕೆ.ವೈ.ಸಿ ಮಾಡಿಕೊಳ್ಳಬಹುದು. ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ನೋದಾವಣೆಯಾಗದ ರೈತರು ಅಥವಾ ಓಟಿಪಿ ಸೃಜನೆಯಾಗದ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಬೇಟಿ ನೀಡಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳಚ್ಚು ನಮೂದಿಸಿ ಇ-ಕೆ.ವೈ.ಸಿ ಮಾಡಿಸಿಕೊಳ್ಳಬಹುದು .ಈಪ್ರಕಿಯೆಗಾಗಿ ಸಾಮಾನ್ಯ ಸೇವಾ ಕೇಂದ್ರದವರಿಗೆ ಶುಲ್ಕ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಬೇಟಿ ನೀಡಬೇಕೆಂದು ಹಾಗೂ ಇ-ಕೆ.ವೈ.ಸಿ ಅಪ್‌ಡೇಟ್ ಮಾಡಲು 2022ರ ಮಾಚ್-31 ಕೊನೆಯ ದಿನಾಂಕವಾಗಿರುತ್ತೆAದು ಚಿತ್ರದುರ್ಗ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕರು-1 ಹೆಚ್ ಹುಲಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Previous articleಜಿಎಂ ಗ್ರೂಪ್ ಮತ್ತು ಅದ್ವಿತೀಯ ಸಂಸ್ಥೆಗಳಿಂದ 10 ಸಾವಿರ ಉದ್ಯೋಗ ಸೃಷ್ಠಿ : ಬಸವರಾಜ ಬೊಮ್ಮಾಯಿ
Next articleಹೀಗೆ ಮಾಡಿದ್ರೆ ನಿಮಗೆ ಖಂಡಿತವಾಗಿಯೂ ಓಮಿಕ್ರಾನ್ ಸೋಂಕು ತಗಲೋದಿಲ್ಲ!..

LEAVE A REPLY

Please enter your comment!
Please enter your name here