ಪರಿಸರ ಪ್ರೇಮಿಯ ಸೈಕಲ್‌ಯಾನ

0
192

ಕೊಟ್ಟೂರು: ಇಂದಿನ ತಾಂತ್ರಿಕ ಯುಗದಲ್ಲಿ ಬಹುತೇಕ ಯವಕರು ಮೋಬೈಲ್ ಗೀಳಿನಲ್ಲಿದ್ದಾರೆ. ಊಟ ತಿಂಡಿ ಕಾಲೇಜು ಯಾವುದೂ ಬೇಡ, ಕೈಯಲ್ಲಿ ಮೊಬೈಲ್ ಕಿವಿಯಿಂದ ಕತ್ತಿನವರೆಗೆ ಇಯರ್‌ಪಾಡ್ಸ್ ಇದ್ದರೆ ಸಾಕು ತಂದೆ ತಾಯಿ ಆಡಿದ ಅಣ್ಣ ತಂಗಿ ಯಾರಗೊಡವೆಯೂ ಬೇಡ. ಆದರೆ ತುಮಕೂರಿನ ಮಹಾಲಿಂಗ ಎಂಬ ಯುವಕ ಅದಮ್ಯ ಪರಿಸರ ಕಾಳಜಿ ಹೊಂದಿ ಪರಿಸರದ ಜಾಗೃತಿ ಮೂಡಿಸಲು ಮಹಾಯಾನ ಕೈಗೊಂಡು ಉಳಿದ ಯುವಕರಿಗೆ ಮಾದರಿಯಾಗಿದ್ದಾನೆ.
ಸೈಕಲ್‌ಯಾನ: ತುಮಕೂರಿನಿಂದ ಪ್ರಾರಂಬಗೊAಡು ರಾಜ್ಯಾದ್ಯಂತ ಸಂಚರಿಸುತ್ತಿರುವ ಸೈಕಲ್‌ಯಾನ ಪ್ರತಿದಿನ 60 ರಿಂದ 70 ಕಿಲೋಮೀಟರ್‌ವರೆಗೆ ಸವಾರಿ ಮಾಡುತ್ತದೆ. ದಾರಿಯಲ್ಲಿ ಸಿಗುವ ಪ್ರತಿ ಗ್ರಾಮ ಮತ್ತು ಕಾಲೇಜು ಇಲ್ಲವೆ ಗ್ರಾಮದ ಕಟ್ಟೆಗೆ ಹೋಗಿ ಅಲ್ಲಿರುವ ವಿದ್ಯಾರ್ಥಿ ಹಾಗೂ ಯುವಕರಿ ಪರಿಸರ ಉಳಿಸುವ ಅಗತ್ಯವನ್ನು ಮನವರಿಕೆ ಮಾಡಿಸುತ್ತಾನೆ. ಪಯಣದ ಹಾದಿಯಲ್ಲಿ ಯಾವುದಾದರೂ ಮರ ಗಿಡ ಬಾಗಿದ್ದರೆ ಅವುಗಳನ್ನು ನೆಟ್ಟಗೆ ಮಡಿ ಮುಂದೆ ಪಯಣಿಸುತ್ತಾನೆ. ಈಗಾಗಲೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಕಾರವಾರ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ವಿಜಯನಗರ,(ಹೊಸಪೇಟೆ) ಬಳ್ಳಾರಿ ಜಿಲ್ಲೆಗಳ ಪ್ರತಿ ತಾಲೂಕಿನಲ್ಲೂ ಸಾಗಿದೆ. ಅನೇಕ ಶಾಲೆಗಳ ಆವರಣದಲ್ಲಿ ನಾನಾ ಬಗೆಯ ಸಸಿ, ಗಿಡ ನೆಡುವುದಲ್ಲದೆ ನಾಡಿನ ಪರಿಸರ ಕುರಿತು ಮತ್ತು ಪ್ರಕೃತಿಯಿಂದ ಮಾನವ ಸಮಾಜಕ್ಕೆ ಅಗುವ ಅನುಕೂಲತೆಗಳ ಬಗ್ಗೆ ಉಪನ್ಯಾಸ ನೀಡುವ ಮೂಲಕ ಜಾಗೃತಿ ಮೂಡಿಸುತ್ತಾನೆ.
ನಿಲ್ಲದ ಯಾನ: ಈಗಾಗಲೆ ಅರ್ದ ಕರ್ನಾಟಕ ರಾಜ್ಯ ಸುತ್ತಿದ ಈ ಯುವಕ ಒಟ್ಟು (1800) ಕಿಲೋಮೀಟರ್ ಸೈಕಲ್ ಮೂಲಕ ಸಂಚರಿಸುವ ಉದ್ದೇಶ ಹೊಂದಿದ್ದಾನೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಯುವಕರು ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಪಡೆಯಕಬೇಕು. ಈ ಪ್ರದೇಶದಲ್ಲಿ ಗಣಿ ಮತ್ತು ಕೈಗಾರಿಕೆ ತಲೆ ಎತ್ತಿದ ಕಾರಣ ಇಲ್ಲಿನ ಪರಿಸರ ಅವನತಿಯ ಅಂಚಿನಲ್ಲಿದೆ. ಯುವಕರ ಜಾಗೃತಗೊಳ್ಳದಿದ್ದರೆ ಹಕ್ಕಿ ಪಕ್ಷಿ, ಕಾಡುಪ್ರಾಣಿ ಮತ್ತು ಪ್ರಕೃತಿ ಸೌಂಧರ್ಯ ಎಲ್ಲವೂ ಸಂಪೂರ್ಣ ನಾಶವಾಗುತ್ತವೆ ಎಂದು ಅವಲೊತ್ತುಕೊಳ್ಳುತ್ತಾನೆ.
ಸಾಹಿತ್ಯ ಚಿತ್ರದೊಂದಿಗೆ ಜಾಗೃತಿ: ಪ್ರಕೃತಿ ಉಳಿವಿಗಾಗಿ ಪರಿಸರದ ರಕ್ಷಣೆಗಾಗಿ ಈ ಪರಿಸರ ಪ್ರೇಮಿ ಒಮ್ಮೆ ಕನ್ನಡ ಚಲನಚಿತ್ರಗಳ ವಿತರಕ ನಾಗಿಯೂ ಕೆಲಸ ನಿರ್ವಹಿಸಿದ್ದಾನೆ. ಪರಿಸರ ಸಂರಕ್ಷಣೆಯ ಆಶಯದಲ್ಲಿ ಕವಿಗಳು ರಚಿಸಿದ ಕವಿತೆಗಳನ್ನು ಹಾಗೂ ಪರಿಸರ ಜಾಗೃತಿಯ ಬಿತ್ತುವ ಭಾವಚಿತ್ರಗಳನ್ನು ಸೈಕಲಿನೊಂದಿಗೆ ಜೋಡಿಸಿಕೊಂಡಿದ್ದಾನೆ. ಈ ಯುವಕರ ಅದಮ್ಯ ಕಾಳಜಿಗೆ ರಜ್ಯದ ಬಹುತೇಕ ಮಂದಿ ಮೆಚ್ಚಿದ್ದಾರೆ.

Previous articleಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ಸಚಿವರಿಂದ ಪುಷ್ಟಿ ಯೋಜನೆಗೆ ಚಾಲನೆ
Next articleಪ.ಪಂ.ನೂತನ ಸಾರಥಿಗಳಿಗೆ ಹಳೆಸವಾಲುಗಳ ಸ್ವಾಗತ

LEAVE A REPLY

Please enter your comment!
Please enter your name here