ನ. 18 ರಂದು ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

0
234

ಕೊಪ್ಪಳ: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 18 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮಗಳು:
ಮುಖ್ಯಮAತ್ರಿಗಳು ನ. 18 ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಏರ್‌ಸ್ಟಿçಪ್(ಎಂ.ಎಸ್.ಪಿ.ಎಲ್ ವಿಮಾನ ನಿಲ್ದಾಣ) ಗೆ ಆಗಮಿಸುವರು. ಬೆಳಿಗ್ಗೆ 11-35 ಗಂಟೆಗೆ ಗಿಣಿಗೇರಾ ಏರ್‌ಸ್ಟಿçಪ್‌ನಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ 11-45ಕ್ಕೆ ಕೊಪ್ಪಳ ತಾಲ್ಲೂಕಿನ ಕ್ರೀಡಾಂಗಣಕ್ಕೆ ಆಗಮಿಸಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 02 ಗಂಟೆಗೆ ಕಾರ್ಯಕ್ರಮ ಕಾಯ್ದಿರಿಸಲಾಗಿದೆ.
ಮಧ್ಯಾಹ್ನ 02-30 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಿAದ ನಿರ್ಗಮಿಸಿ ಮಧ್ಯಾಹ್ನ 02-45 ಗಂಟೆಗೆ ಗಿಣಿಗೇರಾಕ್ಕೆ ಆಗಮಿಸಿ, ಗಿಣಿಗೇರಾ ಏರ್‌ಸ್ಟಿçಪ್‌ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous article“ಗೌರಿಹುಣ್ಣಿಮೆಗೆ ಆಕರ್ಷಕ ಸಕ್ಕರೆ ಆರತಿ ಸಿದ್ದ:ಖರೀದಿಸಲು ಮುಂದಾದ ಮಹಿಳೆಯರು.”
Next articleರಾಷ್ಟಿçÃಯ ಸೇವಾ ಯೋಜನೆ ವಿದ್ಯಾರ್ಥಿನಿಯರಿಂದ ಶ್ರಮದಾನ

LEAVE A REPLY

Please enter your comment!
Please enter your name here