ಪೆಟ್ರೋಲ್ ರೇಟು ಗಗನಕ್ಕೇರತ್ತಿದೆ ಅಂತ ಮಾತ್ರ ಹೇಳ್ತೀವೇ ಹೊರತು ಯಾಕೆ ಏರುತ್ತಿದೆ ಅಂತ ಕಿಂಚಿತ್ತಾದರೂ ಯೋಚಿಸ್ತಿವಾ? ಇಲ್ಲವೇ ಇಲ್ಲ. ಪೆಟ್ರೋಲ್ ರೇಟು ಏರಿಕೆ ಆಯ್ತು ಅಂತ ಗೊತ್ತಾದ ಕೂಡಲೆ, ಈ ಸರ್ಕಾರ ಸರಿ ಇಲ್ಲ, ಆ ರಾಜಕಾರಿಣಿ ಸರಿ ಇಲ್ಲ, ಅವರು ಹಾಗೆ ಮಾಡ್ಬೋದಿತ್ತು, ಇವರು ಹೀಗೆ ಮಾಡ್ಬೋದಿತ್ತು ಅಂತ ಊರಲ್ಲಿ ಇರೋರೆಲ್ಲರ ಮೇಲು ಗೂಬೆ ಕರ್ಸಕ್ಕೆ ನೋಡ್ತೀವೇ ವಿನಹಃ ಕೆಲಸಕ್ಕೆ ಬರುವ ಯೋಚನೆಯನ್ನು ಮಾಡೋದೇ ಇಲ್ಲ..
ಪೆಟ್ರೋಲ್, ಡೀಸಲ್, ಕ್ರೂಡ್ ಆಯಿಲ್ ಇವೆಲ್ಲ ನವೀಕರಿಸಲಾಗದ ಶಕ್ತಿಗಳು ಅಂದರೆ, ನೈಸರ್ಗಿಕವಾಗಿ ನವೀಕರಿಸಲಾಗದ ಸಂಪನ್ಮೂಲ ಅಥವಾ ಶಕ್ತಿಯನ್ನು ನವೀಕರಿಸಲಾಗದ ಶಕ್ತಿಗಳು (ನಾನ್ ರಿನಿವೆಬಲ್ ರಿಸೋರ್ಸ್ ಎನರ್ಜಿ) ಎನ್ನುತ್ತಾರೆ. ಇನ್ನು ಗಾಳಿ, ನೀರು, ಸೌರ ಶಕ್ತಿ ಇವೆಲ್ಲ ನವೀಕರಿಸಬಹುದಾದ ಶಕ್ತಿಗಳು ಅಂದರೆ, ನೈಸರ್ಗಿಕವಾಗಿ ನವೀಕರಿಸಬಹುದಾದ ಸಂಪನ್ಮೂಲ ಅಥವಾ ಶಕ್ತಿಯನ್ನು ನವೀಕರಿಸಲಾಗುವ ಶಕ್ತಿಗಳು (ರಿನಿವೆಬಲ್ ರಿಸೋರ್ಸ್ ಎನರ್ಜಿ) ಎನ್ನುತ್ತಾರೆ.
ನಮಗೆಲ್ಲ ತಿಳಿದಿರುವಂತೆ, ಭಾರತದಲ್ಲಿ ಮತ್ತು ಇನ್ನು ಹಲವಾರು ದೇಶಗಳಲ್ಲಿ ನವೀಕರಿಸಬಹುದಾದ ಶಕ್ತಿಗಿಂತ ನವೀಕರಿಸಲಾಗದ ಶಕ್ತಿಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದಾಗಿ ಈಗಾಗಲೆ ವಿಶ್ವವು ‘ಗ್ರೀನ್ ಹೌಸ್ ಎಫೆಕ್ಟೆ’ ಎನ್ನುವ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯಿಂದಾಗಿ ಸೂರ್ಯನಿಂದ ಹೊರಹೊಮ್ಮುವ ಇನ್ಫಾçರೆಡ್ ಕಿರಣಗಳಿಂದ ನಮ್ಮನ್ನು ಕಾಪಾಡಬೇಕಾದ ಓಜಾನ್ ಪದರ ಇಲ್ಲವಾಗುತ್ತಿದೆ. ಇದು ಹೀಗೆ ಮುಂದುವರಿದರೆ, ಮುಂದೊAದು ದಿನ ನಾವೆಲ್ಲರೂ ಸುಟ್ಟು ಭಸ್ಮವಾಗುದರಲ್ಲಿ ಎರಡು ಮಾತಿಲ್ಲ.
ಇದೀಗ ಎಚ್ಚೆತ್ತುಗೊಂಡಿರುವ, ಬಹುತೇಕ ದೇಶಗಳು ನವೀಕರಿಸಬಹುದಾದ ಶಕ್ತಿ ಕಡೆಗೆ ಹೆಚ್ಚು ಗಮನಹರಿಸಲು ಪ್ರಾರಂಭಿಸಿದ್ದಾರೆ. ನವೀಕರಿಸಬಹುದಾದ ಶಕ್ತಿಯಲ್ಲಿ ದೇಶದ ಭವಿಷ್ಯ ಅಡಗಿದೆ ಎಂಬುದನ್ನು ತಡವಾಗಿಯಾದರೂ ಅರಿತಿದ್ದಾರೆ. ಪ್ರಸ್ತುತ ಭಾರತದಲ್ಲಿ ಸೌರ ಶಕ್ತಿಯ ಮೇಲೆ ಹೆಚ್ಚು ಗಮನಹರರಿಸಲಾಗುತ್ತಿದೆ. ಭಾರತದ ರಾಷ್ಟೀಯ ಪ್ರಜಾಸತಾತ್ಮಕ ಒಕ್ಕೂಟವು ‘ ಒಂದೇ ಸೂರ್ಯ, ಒಂದೇ ಜಗತ್ತು, ಒಂದೇ ಗ್ರಿಡ್’ ಅನ್ನುವ ನೂತನ ಯೋಜನೆಯನ್ನು ರೂಪಿಸಲು ಮುಂದಾಗಿದೆ. ಇನ್ನು ಈ ಯೋಜನೆಯು ಮೂರು ಹಂತಗಳಲ್ಲಿ ರೂಪಗೊಳ್ಳಲಿದ್ದು, ಮೊದಲನೆಯ ಹಂತದಲ್ಲಿ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ -ದಕ್ಷಿಣ ಆಗ್ನೇಯ ಏಷ್ಯಾಗಳ ನಡುವೆ ಪರಸ್ಪರ ಸಂಪರ್ಕವನ್ನು ನಿರ್ಮಿಸಿ, ಆ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯನ್ನು ಗರಿಷ್ಠ ಮಟ್ಟದಲ್ಲಿ ಪೂರೈಸಲು ಸೌರಶಕ್ತಿಯಂತಹ ಹಸಿರು ಇಂಧನಗಳನ್ನು ಬಳಸಿಕೊಳ್ಳಲಾಗುತ್ತಿದೆ.