ಕಳೆದ ಕೆಲ ರ್ಷಗಳಿಂದ ಬಾಯ್ಫ್ರೆಂಡ್-ರ್ಲ್ಫ್ರೆಂಡ್ ಆಗಿದ್ದ ನಟಿ ನಯನತಾರಾ ಹಾಗೂ ವಿಗ್ನೇಶ್ ವಿವಾಹವಾಗುತ್ತಿದ್ದಾರೆ. ನಯನತಾರಾ ಹಾಗೂ ವಿಗ್ನೇಶ್ ಇಂದೇ (ಜೂನ್ 09) ವಿವಾಹವಾಗುತ್ತಿದ್ದಾರೆ. ತಮ್ಮ ವಿವಾಹ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಖುದ್ದಾಗಿ ತೆರಳಿ ಹಲವು ಅತಿಥಿಗಳನ್ನು ವಿವಾಹಕ್ಕೆ ಆಮಂತ್ರಿಸಿದ್ದಾರೆ.
ತಮಿಳು ಚಿತ್ರರಂಗದ ಈ ತಾರಾ ಜೋಡಿಯ ವಿವಾಹಕ್ಕೆ ಹಲವು ಸಿನಿಮಾ ಹಾಗೂ ರಾಜಕೀಯ ರಂಗದ ಗಣ್ಯರು ಆಗಮಿಸಲಿದ್ದಾರೆ. ನಯನತಾರಾ-ವಿಘ್ನೇಶ್ ವಿವಾಹಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್, ಅವರ ಪುತ್ರ ಉದಯ ನಿಧಿ ಸ್ಟಾಲಿನ್ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.