ಬಳ್ಳಾರಿ: ನಮ್ಮ ಸರ್ಕಾರದಲ್ಲಿ 7 ಜನ ಲಿಂಗಾಯತ ಸಮುದಾಯದವರು ಸಚಿವರಾಗಿದ್ದಾರೆ.ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಕ್ರಾಂತಿ ಹಬ್ಬದ ನಂತರ ಸರ್ಕಾರ ಪತನವಾಗಲಿದೆ ಎಂಬುದು ಸುಳ್ಳು 2024ರಲ್ಲಿ ಬಿಜೆಪಿ ಮುಕ್ತ ಭಾರತ ವಾಗಲಿದೆ ಎಂದು ಸಚಿವ ಸಂತೋಷ್ ಲಾಡ್ ಅವರು ಭವಿಷ್ಯ ನುಡಿದರು.ಬಳ್ಳಾರಿಯಲ್ಲಿ ಲೋಕ ಸಭಾ ಚುನಾವಣೆಗೆ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಲೋಕ ಸಭಾ ಚುನಾವಣೆಗೆ ಸಂಬಂಧಿಸಿದಂತೆ ವೀಕ್ಷಕರು ಬರುತ್ತಾರೆ.ಪಕ್ಷದ ಪದಾಧಿಕಾರಿಗಳು ಹಿರಿಯ ಮುಖಂಡರು ಜೊತೆಗೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಲಿದ್ದಾರೆ ಎಂದರು.ನಮ್ಮ ಸರ್ಕಾರದಲ್ಲಿ 7 ಜನ ಲಿಂಗಾಯತ ಸಮುದಾಯದವರು ಸಚಿವರಾಗಿದ್ದಾರೆ.ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಲ್ಲಾರಿಗೂ ಸಮ ಬಾಳು ಸಮ ಪಾಲು ಎಂಬ ತತ್ವ ಸಿದ್ಧಾಂತ ಹೊಂದಿದೆ. ಲಿಂಗಾಯತ ಸಮುದಾಯವನ್ನು ನಮ್ಮ ಸಿಎಂ ಕಡೆಗಣಿಸಿಲ್ಲ ಶ್ಯಾಮನೂರು ಶಿವಶಂಕರಪ್ಪ ಯಾವ ಹಿನ್ನೆಲೆಯಲ್ಲಿ ಹೇಳುತ್ತಿದ್ದಾರೆ ಎಂಬುದನ್ನು ಅವರೇ ಹೇಳಬೇಕು.ಇದಕ್ಕೂ ಮುನ್ನ ಕಾರ್ಮಿಕ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಬಳ್ಳಾರಿ ನಗರಕ್ಕೆ ಆಗಮಿಸಿದ ಸಂತೋಷ್ ಲಾಡ್ ಅವರನ್ನು ಕಂಟೋನ್ಮೆಂಟ್ ನಿಂದ ಎಸ್ಪಿ ಸರ್ಕಲ್ ವರೆಗೆ ಬೈಕ್ ರ್ಯಾಲಿ ಮೂಲಕ ಅದ್ಧೂರಿಯಾಗಿ ಕರೆತರಲಾಯಿತು.
ಈ ಸಂದರ್ಭದಲ್ಲಿ ಶಾಸಕ ಈ. ತುಕಾರಾಂ, ಶಾಸಕ ಜೆಎನ್ ಗಣೇಶ್, ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ರಫೀಕ್, ಮಾನಯ್ಯ,ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.