ದಕ್ಷಿಣ ಭಾರತದ ಖ್ಯಾತ ನಟ ಧನುಷ್ ತಮ್ಮ ಅಭಿನಯದ ಮೂಲಕವೇ ಹೆಸರು ಮಾಡಿದವರು. ಯಾವುದೇ ಪಾತ್ರ ಕೊಟ್ಟರು ಆಳವಾಗಿ ಇಳಿದು ಅಭಿನಯಿಸುವ ಇವರಿಗೆ ಇಂದು ಜನ್ಮದಿನದ ಸಂಭ್ರಮ. ದಕ್ಷಿಣ ಭಾರತದ ಖ್ಯಾತ ನಟ ಧನುಷ್ ತಮ್ಮ ಅಭಿನಯದ ಮೂಲಕವೇ ಹೆಸರು ಮಾಡಿದವರು. ಯಾವುದೇ ಪಾತ್ರ ಕೊಟ್ಟರು ಆಳವಾಗಿ ಇಳಿದು ಅಭಿನಯಿಸುವ ಈ ಚತುರ ನಟನಿಗೆ ಇಂದು ಜನ್ಮದಿನದ ಸಂಭ್ರಮ. ಧನುಷ್ ಇಂದು ತಮ್ಮ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ನಟ ಧನುಷ್ ನಿಜವಾದ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ಎಂದು. ಇವರು 28 ಜುಲೈ 1983 ರಲ್ಲಿ ತಮಿಳುನಾಡಿನ ಚೆನೈ ನಲ್ಲಿ ಜನಿಸಿದರು. ಇವರ ತಂದೆ ಕಸ್ತೂರಿ ರಾಜ್ ಮತ್ತು ತಾಯಿ ವಿಜಯಲಕ್ಷ್ಮಿ ಎಂದು. ಇವರು ಥೈ ಸಾಥಿಯ ಹೈ ಸ್ಕೂಲ್ ನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ.
ಧನುಷ್ ರವರು ಇವರ ಅಣ್ಣನ ಸೆಲ್ವರಾಘವಾಂ ಒತ್ತಾಯದಿಂದ ಚಿತ್ರಂಗಕ್ಕೆ ಎಂಟ್ರಿ ನೀಡಿದ ಈ ಸ್ಟಾರ್, ನಂತರ ಮತ್ತೆ ಹಿಂದೆ ತಿರುಗಿ ನೋಡಿಲೇ ಇಲ್ಲ. ಸಾಲು ಸಾಲು ಹಿಟ್ ಸಿನಿಮಾಗಳ ಜೊತೆ ರಾಷ್ಟ್ರಪ್ರಶ್ತಿಯನ್ನು ಬಾಚಿಕೊಂಡಿದ್ದಾರೆ. 2002ರಲ್ಲಿ ತೆರೆಕಂಡ ತುಳುವಾಧೋ ಇಲಾಮಯ ಚಿತ್ರದ ಮೂಲಕ ಮೊದಲ ಬಾರಿಗೆ ಧನುಷ್ ಬೆಳ್ಳಿತೆರೆಗೆ ಎಂಟ್ರಿ ನೀಡಿದರು. ಈ ಚಿತ್ರವನ್ನು ನಿರ್ದೇಶಿಸಿದವರು ಇವರ ತಂದೆ ಕಸ್ತೂರಿರಾಜ್ ಈ ಚಿತ್ರ ಧನುಷ್ ರ ವರಿಗೆ ಉತ್ತಮ ಹೆಸರು ತಂದುಕೊಟ್ಟಿತು.
ನಂತರ ಧನುಷ್ ಮತ್ತೆ ಎಂದಿಗೂ ಹಿಂದೆ ತಿರುಗಿ ನೋಡಲೇ ಇಲ್ಲ. ತಮಿಳು ಚಿತ್ರರಂಗದಲ್ಲಿ ಓರ್ವ ಭರವಸೆಯ ನಟನಾಗಿ ಮುನ್ನುಗ್ಗಿದರು. ಅಲ್ಲದೇ ವೈ ದಿಸ್ ಕೊಲವರಿ ಡಿ ಎಂಬ ಹಾಡಿನ ಮೂಲಕ ಧನುಷ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಸಿದರು. ಈ ಹಾಡು ಅಂದಿನ ಕಾಲಕ್ಕೆ ಹೊಸ ಸಂಚಲನವನ್ನೇ ಮೂಡಿಸಿತ್ತು.
ಇನ್ನು, ವೈವಾಹಿಕ ಜೀವನಕ್ಕೆ ಬಂದಲ್ಲಿ ಧನುಷ್ ಸೂಪರ್ ಸ್ಟಾರ್ ರಜನಿಕಾಂತ್ ರ ಪುತ್ರಿ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆ ಆಗಿ ಅನೇಕ ವರ್ಷಗಳ ನಂತರ ಅಂದರೆ ಕಳೆದ ಕೆಲ ವರ್ಷಗಳ ಹಿಂದೆ ಇವರಿಬ್ಬರೂ ಡಿವೋರ್ಸ್ ಪಡೆಯುವ ಮೂಲಕ ದೂರವಾಗಿದ್ದಾರೆ. ಸದ್ಯ ಧನುಷ್ ಹಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದು, ದಿ ಗ್ರೇ ಮ್ಯಾನ್ ಎಂಬ ಹಾಲಿವುಡ್ ಚಿತ್ರದಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ.
ಧನುಷ್ ಅವರ ಅಭಿನಕ್ಕೆ ಈಗಾಗಲೇ ರಾಷ್ಟ್ರ ಪ್ರಶಸ್ತಿ ದೊರಕಿದೆ. ‘ಆಡುಕಾಲ್ಮ್’ ನಲ್ಲಿನ ಅಭಿನಯಕ್ಕಾಗಿ 2010ರಲ್ಲಿ ಮತ್ತು ‘ಅಸುರನ್’ ನಲ್ಲಿನ ಅಭಿನಯಕ್ಕಾಗಿ ಧನುಷ್ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಭಾಗವಾಗಿ 2019ರ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆಲ್ಲುವ ಮೂಲಕ 2 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 13 ಸೈಮಾ ಪ್ರಶಸ್ತಿ, ಏಳು ಫಿಲ್ಮ್ ಫೇರ್, ಐದು ವಿಕಟನ್ ಮತ್ತು ಐದು ಎಡಿಸನ್ ಪ್ರಶಸ್ತಿ ಪಡೆದಿದ್ದು ಧನುಷ್ ರವರ ಅಭಿನಯ ಪ್ರತಿಮೆಗೆ ಸಾಕ್ಷಿಯಾಗಿದೆ.