ಬೆಳಗಾಯಿತು ವಾರ್ತೆ. ಜ.08. ಸಿರುಗುಪ್ಪ
ರಾಜ್ಯಾದ್ಯಂತ ವಾರಾಂತ್ಯದ ಕೋವಿಡ್ ಲಾಕ್‌ಡೌನ್ ಇರುವುದರಿಂದ ನಗರದಲ್ಲಿನ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದ್ದು, ತರಕಾರಿ, ಹಾಲು, ಹಣ್ಣು, ಔಷದಿ, ಮೊಟ್ಟೆ, ಮಾಂಸ, ಕಿರಾಣಿ ಅಂಗಡಿಗಳು, ಸಾರಿಗೆ ಬಸ್ ಓಡಾಟ ಹಾಗೂ ನಿಲ್ದಾಣಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ಅನುವು ಮಾಡಿಕೊಡಲಾಗಿದೆ.
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಅನಗತ್ಯ ಓಡಾಟವನ್ನು ತಡೆಗಟ್ಟಲು ಪೋಲೀಸ್ ಇಲಾಖೆಯಿಂದ, ದಂಡ ವಿಧಿಸಲಾಯಿತು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಧರಿಸದೇ ವ್ಯವಹರಿಸುವ ವರ್ತಕರಿಗೆ ನಗರಸಭೆ ವತಿಯಿಂದ ದಂಡ ಹಾಕಲಾಯಿತು.

Previous article15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ
Next article“ವೀಕೆಂಡ್ ಕರ್ಪ್ಯೂ ಪರಿಣಾಮವಿಲ್ಲ.”

LEAVE A REPLY

Please enter your comment!
Please enter your name here