ಬೆಳಗಾಯಿತು ವಾರ್ತೆ
ಕೊಟ್ಟೂರು: ಶಾಲಾ ಆವರಣದಲ್ಲಿ ಆಕರ್ಷಣೆಯ ಹಚ್ಚಹಸಿರ ಗಿಡ-ಮರಗಳಿದ್ದರೆ, ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಿ ಅವರ ಕಲಿಕೆ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಎಂದು ದ ಪ್ರಿಸ್ಟೀನ್ ಸ್ಕೂಲ್ ನ ಕಾರ್ಯದರ್ಶಿ ಎಂ.ಎಂ.ಜೆ. ಶೋಭಿತ್ ಹೇಳಿದರು.
ತಾಲೂಕಿನ ಹಾರಕನಾಳು ಕ್ರಾಸ್ ಬಳಿ ಇರುವ ದ ಪ್ರಿಸ್ಟೀನ್ ಶಾಲೆಯಲ್ಲಿ ಬುಧವಾರ ಎಲ್ಕೆಜಿ-ಯುಕೆಜಿ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ ಆವರಣದ ಪ್ರತಿ ಗಿಡಕ್ಕೆ ಮಕ್ಕಳ ಹೆಸರನ್ನಿಟ್ಟು ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನೀಡಿದ್ದೇವೆ ಎಂದು ಹೇಳಿದರು.
ಮಹಾಮಾರಿ ಕೊರೊನಾ ವೈರಸ್ ಮತ್ತು ಲಾಕ್ಡೌನ್ ನಿಂದ ಕಳೆದ ಎರಡು ವರ್ಷದಿಂದ ಶಾಲೆಗಳು ಸಂಪೂರ್ಣ ಆರಂಭವಾಗದ ಕಾರಣ ಕೇವಲ ಆನ್ಲೈನ್ ಕ್ಲಾಸ್ಗಳ ಮೂಲಕ ಶಿಕ್ಷಣ ಪಡೆದ ಮಕ್ಕಳಿಗೆ ಪರಿಸರದಿಂದ ಸಿಗುವ ಅನುಕೂಲಗಳ ಬಗ್ಗೆ ಮತ್ತು ಪ್ರಕೃತಿಯ ಮಹತ್ವ ತಿಳಿಸುವ ಸಲುವಾಗಿ ಈ ಕಾರ್ಯವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲೆಗಳಲ್ಲಿ ಉತ್ತಮ ಪರಿಸರವಿದ್ದರೆ ಮಕ್ಕಳ ಕಲಿಕೆಯೂ ಉತ್ತಮ ರೀತಿಯಲ್ಲಿ ರೂಪಗೊಳ್ಳುತ್ತದೆ
ಪರಿಸರದ ಸೊಬಗಿನ ನಡುವೆ ಪಾಠ ಪ್ರವಚನಗಳು ನಡೆದರೆ ಮಕ್ಕಳಲ್ಲಿ ಕಲಿಕೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಕ್ರಿಯಾಶೀಲತೆಯು ಅವರಲ್ಲಿ ಸದಾ ಮುಂದಿರುತ್ತಾರೆ ಶಾಲೆಯ ಮುಖ್ಯಗುರುಗಳಾದ ಕಾವ್ಯ ಶೋಬಿತ್ ಎಂದು ಹೇಳಿದರು.
ಬಾಕ್ಸ್ ನ್ಯೂಸ್
ಪ್ಲಾಸ್ಟಿಕ್ ಬಳಕೆಯಿಂದ ಹದಗೆಟ್ಟಿರುವ ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಹಸುಗಳ ಸೆಗಣಿಯಿಂದ ತಯಾರಿಸಿದ ಕುಂಡಲಿಯಲ್ಲಿ ತುಳಸಿ ಗಿಡಗಳ ನೆಟ್ಟು ಮನೆಯಲ್ಲಿಯೂ ಪರಿಸರದ ಬಗ್ಗೆ ಕಾಳಜಿವಹಿಸಲು ಶಾಲೆಯ ಪ್ರತಿ ವಿದ್ಯಾರ್ಥಿಗಳಿಗೂ ವಿತರಿಸಲಾಯಿತು.