ಹಗರಿಬೊಮ್ಮನಹಳ್ಳಿ: ಕೇಂದ್ರ ಸರಕಾರದ ನೂತನ 3 ಕಾಯದೆಗಳನ್ನು ವಿರೋಧಿಸಿ , ಎಂಎಸ್ಪಿ ಕಾನೂನು ಚೌಕಟ್ಟಿನಲ್ಲಿ ರೋಪಿಸುವಂತೆ ದೆಹಲಿ ಗಡಿಭಾದಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ವ್ಯೆಕ್ತಪಡಿಸಿ ಬಾಗಲಕೋಟೆ ಜಿಲ್ಲಾ ಹುನುಗುಂದ ತಾಲೂಕಿನ ಎಂಟೆಕ್ ಇಂಜಿಯರ್ ನಾಗರಾಜ್ ಕಲಕುಟಿಗೆಯವರು ಜಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ದೆಹಲಿವರೆಗೆ ಪಾತಯಾತ್ರೆ ಹಮ್ಮಿಕೊಂಡು ಹಗರಿಬೊಮ್ಮನಹಳ್ಳಿಗೆ ಆಗಮಿಸಿದರು.
ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರವು ದೇಶದ ಬೆನ್ನೆಲುಬಾದ ರೈತರ ಬೇಡಿಕಗಳನ್ನು ಈಡೇರಿಸಬೇಕಿದೆ,ಎಂಎಸ್ಪಿ ಬೇಡಿಕೆಯು ನ್ಯಾಯಯುತವಾಗಿದೆ, ಈ ಬೇಡಿಕೆಯಿಂದ ಕುಟುಂಬ ಭದ್ರವಾಗುತ್ತದೆ ಇದರಿಂದ ಗ್ರಾಮ , ಹೋಬಳಿ, ತಾಲೂಕು ದೇಶ ಸುಭದ್ರ ಪರಿಸ್ಥಿತಿ ತಲುಪುತ್ತದೆ ಹಾಗಾಗಿ ಪ್ರತಭಟನಾ ನಿರತ ರೈತರಿಗೆ ಬೆಂಬಲಕ್ಕಾಗಿ ಈ ಪಾದಯಾತ್ರೆ ಪ್ರಾರಂಭಿಸಿದ್ದು ಇದು ಫೆಬ್ರುವರಿ 11ರಂದು ್ರ ಪ್ರಾರಂಭಿಸಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಕರೋನಾ ಎರಡನೆ ಲಾಕ್ಡ್ನ್ ಅಗಿದೆ , ಜುಲೈ 3ರಂದು ಮತ್ತೆ ಪ್ರಾರಂಭಿಸಿ ಇವರೆಗೆ 24ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಬಂದಿದ್ದು ಉಳಿದ ಜಿಲ್ಲೆಗೂ ಪಾದಯಾತ್ರೆ ಮಾಡಿ ಸುಮಾರು 7000 ಕಿ.ಮೀ ಪಾದಯಾತ್ರೆಯಾಗಿದ್ದು , ಸದ್ಯ2620 ಕಿ.ಮಿ ಮುಗಿಸಿದ್ದು ಉಳಿದ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಯಾದಗಿರಿ, ಕಲ್ಬುರಗಿ, ಬೀದರ, ಬಾಗಲಕೋಟ, ಬಿಜಾಪುರದಿಂದ ಮುಂದೆ ಸಾಗಲಾಗುವುದು, ಪಾದಯಾತ್ರೆಗೆ ಹತ್ತಾರು ಹಿತ ಚಿಂತಕರು, ರೈತ ಸಂಘಟನೆಗಳು ಸ್ವಾಗತ ಕೋರಿದ್ದು ಅತ್ಮವಿಶ್ವಾಸ ಹೆಚ್ಚಿಸಿದೆ ಎಂದರು.