ದುಗರ್ಮ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ತಲುಪಿಸಲಿರುವ ಆಕ್ಟಾಕಾಪ್ಟರ್ ಡ್ರೋನ್!

  0
  65

  ಕೋವಿಡ್-19 ಭಾರತದಲ್ಲಿ ಮೊದಲು ನಗರಗಳನ್ನು ಆವರಿಸಿತು. ನಗರಗಳಲ್ಲಿ ಈ ಸಾಂಕ್ರಾಮಿಕ ಖಾಯಿಲೆಯ ಹಾವಳಿಯನ್ನು ನಿಯಂತ್ರಣಕ್ಕೆ ತರಬೇಕು ಎನ್ನುವಷ್ಟರಲ್ಲಿ ಈ ವೈರಾಣು ಹಳ್ಳಿ ಹಳ್ಳಿಗಳನ್ನು ಆಕ್ರಮಿಸಿಕೊಂಡಿತು. ಇದರಿಂದಾಗಿ ದೇಶದಲ್ಲಿ ಆರೋಗ್ಯ ಮೂಲ ಭೂತ ಸೌಕರ್ಯಗಳ ಕೊರತೆ ಕಾಣಲು ಪ್ರಾರಂಭವಾಯಿತು ಮತ್ತಿದಕ್ಕೆ ಸಾವಿರಾರು ಜನರು ಬಲಿಯಾಗಬೇಕಾಯಿತು. ಕೊನೆಗೂ ಈ ಕೋವಿಡ್-19ಗೆ ಕಡಿವಾಣ ಹಾಕಬಲ್ಲ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಯಶಸ್ವಿಯಾಯಿತು. ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ, ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ, ಎಲ್ಲಾ ದೇಶಗಳು ತಮ್ಮ ತಮ್ಮ ದೇಶವಾಸಿಗಳಿಗೆ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆಯನ್ನು ವಿತರಿಸಲು ಪ್ರಾರಂಭಿಸಿತು. ಆದರೆ, ಕೊವಿಡ್-19 ಸೋಂಕು ಹರಡಿದಷ್ಟು ವೇಗವಾಗಿ, ಕೋವಿಡ್-19 ತಡೆಯುವ ಲಸಿಕೆಯನ್ನು ವಿತರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಮತ್ತದೇ, ಆರೋಗ್ಯ ಮೂಲ ಭೂತ ಸೌಕರ್ಯಗಳ ಕೊರತೆ. ಆದರೆ, ಈ ಸಮಸ್ಯೆ ಇದೀಗ ಮುಕ್ತಾಯ ಹಾಡುವ ಸಮಯ ಬಂದಿದೆ. ಅದು ಹೇಗೆ ಅಂತೀರ ಹಳ್ತೀನಿ ಕೇಳಿ..
  ಇನ್ನುಮುಂದೆ, ಡೋನ್‌ಗಳು ದುಗರ್ಮ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಕೋವಿಡ್ ಲಸಿಕೆಯನ್ನು, ಹಾಗು ಇನ್ನಿತರೆ ಔಷಧಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಲುಪಿಸುತ್ತವೆ. ತ್ವರಿತವಾಗಿ ವೈದ್ಯಕೀಯ ಸೌಲಭ್ಯಗಳನ್ನು ನೀಡಲು, ಅಥವಾ ಪ್ರಾರ್ಥಮಿಕ ಚಿಕಿತ್ಸೆಯಾಗಿ ಔಷಧಗಳನ್ನು ನೀಡಲು ಸಾಧ್ಯವಿಲ್ಲದಂತಹ ದುಗರ್ಮ ಪ್ರದೇಶಗಳಲ್ಲಿರುವ ಜನರಿಗೆ, ಅತ್ಯಂತ ಕಡಿಮೆ ಸಮಯದಲ್ಲಿ ಔಷಧಿಗಳನ್ನು ತಲುಪಿಸುವ ಕಾರ್ಯವನ್ನು ಈ ಡ್ರೋನ್‌ಗಳು ಮಾಡುತ್ತವೆ. ಅಂದಹಾಗೆ ಈ ಡ್ರೋನ್‌ಗಳ ಹೆಸರು ‘ಆಕ್ಟಾಕಾಪ್ಟರ’

  Previous article“ಓಮಿಕ್ರನಾ ವೈರಾಣುವನ್ನು ಪತ್ತೆಹಚ್ಚಿದ್ದಕ್ಕಾಗಿ ನಮಗೆ ಶಿಕ್ಷೆ ವಿಧಿಸಲಾಗಿದೆ”: ದಕ್ಷಿಣ ಆಫ್ರಿಕಾ
  Next articleಉಚಿತ ಹೊಲಿಗೆ ಯಂತ್ರ, ದಿನಸಿ ಕಿಟ್‌ಗಳ ವಿತರಣೆ

  LEAVE A REPLY

  Please enter your comment!
  Please enter your name here