ತಳಮಟ್ಟದ ಅಭಿವೃದ್ದಿ ಬಿ.ಜೆ.ಪಿಯಿಂದ ಮಾತ್ರ ಸಾಧ್ಯ

0
115
????????????????????????????????????

ಸಿರುಗುಪ್ಪ: ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಘಟಕದಿಂದ 2021ಬಳ್ಳಾರಿ ಜಿಲ್ಲಾ ಸ್ಥಳೀಯ ಸಂಸ್ಥೆಗಳಿAದ ನಡೆಯುವ ವಿಧಾನ ಪರಿಷತ್ ನ ಚುನಾವಣೆಯ ಪ್ರಚಾರ ಸಭೆಯನ್ನು ಸಾರಿಗೆ ಸಚಿವ ಶ್ರೀ ರಾಮುಲು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನಮ್ಮ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗಾಗಿ ಶೇ.50ರ ಮೀಸಲಾತಿ ಜಾರಿಗೆ ತಂದಿದ್ದೇವೆ, ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಇಂದು ಪ್ರಧಾನಿಗಳಿಂದ 2ಕೋಟಿವರೆಗೂ ಅನುದಾನ ದೊರೆಯುತ್ತಿದೆಂದರೆ ನೀವು ನಮಗೆ ನೀಡಿದ ಆಶೀರ್ವಾದ ಫಲವಾಗಿದೆ.
ಕಾಂಗ್ರೇಸ್ ಪಕ್ಷ ಒಡೆದ ಮನೆಯಂತಾಗಿದ್ದು ತಮ್ಮಲ್ಲಿನ ಅಸಮತೋಲನವನ್ನು ನಿಯಂತ್ರಿಸಲಾಗದೇ ವಿಶ್ವದ ಜನನಾಯಕರಾಗಿರುವ ಪ್ರಧಾನಿಯವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಆ ಪಕ್ಷಕ್ಕೆ ಶೋಭೆ ತರುವುದಿಲ್ಲ, ನಾವು ಈ ಬಾರಿ 25 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನು ಗೆದ್ದುತೋರಿಸುತ್ತೇವೆ, ತಳಮಟ್ಟದ ಅಭಿವೃದ್ದಿಯೇ ನಮ್ಮ ಗುರಿಯಾಗಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವೈ.ಎಂ.ಸತೀಶ್ ಅವರಿಗೆ ನಿಮ್ಮ ಅಮೂಲ್ಯ ಮತವನ್ನು ನೀಡುವಂತೆ ತಿಳಿಸಿದರು.
ಶಾಸಕ ಎಂ.ಎಸ್.ಸೋಮಲಿAಗಪ್ಪ ಮಾತನಾಡಿ ಡಿ.10ರಂದು ನಡೆಯುವ ವಿಧಾನ ಪರಿಷತ್ ಚುನಾವಣಿಯಲ್ಲಿ ನಮ್ಮತಾಲೂಕಿನಲ್ಲಿ 554 ಸ್ಥಳೀಯ ಸಂಸ್ಥೆಯ ಸದಸ್ಯರಿದ್ದು, 400 ಮತಗಳನ್ನು ಪಡೆದು ಜಯಗಳಿಸಲು ಸಹಕರಿಸಬೇಕೆಂದು ತಿಳಿಸಿದರು.

Previous articleದ ಪ್ರಿಸ್ಟೀನ್ ಸ್ಕೂಲ್ ನಲ್ಲಿ ಗಿಡಗಳಿಗೆ ಮಕ್ಕಳ ಹೆಸರು
Next article150ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ, 3500 ದಂಡ

LEAVE A REPLY

Please enter your comment!
Please enter your name here