ಜ್ಯೂರಿಚ್: ಸ್ವಿಡ್ಜರ್ಲೆಂಡಿನ ಜ್ಯೂರಿಚ್ನಲ್ಲಿ ನಡೆದ ಡೈಮಂಡ್ ಲೀಗ್ ಟ್ರೋಫಿಯಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಪ್ರತಿಷ್ಠಿತ ಡೈಮಂಡ್ ಲೀಗ್ ಟ್ರೋಫಿ ಗೆಲ್ಲುವ ಮೂಲಕ ಮತ್ತೊಂದು ಹೆಮ್ಮೆಯ ಗರಿ ಮುಡಿಗೇರಿಸಿಕೊಂಡಿದ್ದಾರೆ.
೮೮.೪೪ ಮೀಟರ್ ದೂರ ಜಾವಲಿನ್ ಈ ಸಾಧನೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ.
ನೀರಜ್ ತಮ್ಮ ೩ನೇ ಪ್ರಯತ್ನದಲ್ಲಿ ೮೮.೦೦ಮೀ, ೪ನೇ ಪ್ರಯತ್ನದಲ್ಲಿ ೮೬.೧೧ಮೀ ಮತ್ತು ೫ನೇ ಯತ್ನದಲ್ಲಿ ೮೭.೦೦ಮೀ ಮತ್ತು ಅಂತಿಮ ಪ್ರಯತ್ನದಲ್ಲಿ ೮೩.೬೦ಮೀ ಎಸೆದರು. ವಡ್ಲೆಜ್ ೮೬.೯೪ ಮೀಟರ್ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ೨ನೇ ಸ್ಥಾನ ಪಡೆದರು.
ನೀರಜ್ ೨೦೨೧ ರಲ್ಲಿ ಒಲಿಂಪಿಕ್ ಚಿನ್ನ, ೨೦೧೮ ರಲ್ಲಿ ಏಷ್ಯನ್ ಗೇಮ್ಸ್ ಚಿನ್ನ, ೨೦೧೮ ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನ, ೨೦೨೨ ರಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.