20.8 C
New York
Saturday, September 25, 2021

Buy now

spot_img

ಡಣಾಯಕನಕೆರೆಗೆ ಹರಿದ ತುಂಗಭದ್ರೆ

ಮರಿಯಮ್ಮನಹಳ್ಳಿ:ಜಿಲ್ಲೆಯ ಎರಡನೇ ಅತಿದೊಡ್ಡ, ಹೋಬಳಿಯ ಐತಿಹಾಸಿಕ ಡಣಾಯಕನಕೆರೆಗೆ ತುಂಗಭದ್ರಾ ನದಿಯ ನೀರು ತುಂಬಿಸುವ, ಡಣಾಯಕನಕೆರೆ ಏತನೀರಾವರಿ ಯೋಜನೆಯ ಯಂತ್ರಗಳ ಬಟನ್ ಒತ್ತುವ ಮೂಲಕ ಇಂದು ನೀರು ಹರಿಸುವ ಕಾರ್ಯಕ್ಕೆ ರೈತರು ಚಾಲನೆ ನೀಡಿದರು.ದಶಕಗಳ ರೈತರ ಹೋರಾಟದ ಫಲವಾಗಿ 2012ರಲ್ಲಿ ಡಣಾಯಕನಕೆರೆ ಏತನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಯೋಜನೆಯಿಂದ,ಕೆರೆಯ ಮಾಗಾಣಿಯ ಪ್ರದೇಶದ ಸಾವಿರಾರು ಎಕರೆ ಜಮೀನುಗಳಿಗೆ ನೀರುಣಿಸಲಾಗುತ್ತಿದೆ.ಇದರಿಂದ ಕೆರೆ ಮಾಗಾಣಿ ಪ್ರದೇಶದಲ್ಲಿ ಬೆಳೆಗಳು ನಳನಳಿಸುತ್ತವೆ ಎಂದು ಡಣಾಯಕನಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು, ರೈತರು ಹರ್ಷ ವ್ಯಕ್ತಪಡಿಸಿದರು.ಡಣಾಪುರ ಬಳಿಯ ಏತನೀರಾವರಿ ಯೋಜನೆಯ ಯಂತ್ರಗಳು ಆರಂಭಗೊಂಡು, ಕೆರೆಯ ಬಳಿಯ ಪೈಪ್ ಗಳಲ್ಲಿ ನೀರು ಹರಿದ ವೇಳೆ ರೈತರು, ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು ಗಂಗಾಪೂಜೆ ನೆರವೇರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,956FollowersFollow
0SubscribersSubscribe
- Advertisement -spot_img

Latest Articles