ಸಿರುಗುಪ್ಪ: ನಗರದ ಪೊಲೀಸ್ ವಸತಿ ಗೃಹದ ಹತ್ತಿರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ.ಎಸ್.ಸೋಮಲಿAಗಪ್ಪ ಭೂಮಿ ಪೂಜೆ ಸಲ್ಲ್ಲಿಸಿದರು.
ನಂತರ ಮಾತನಾಡಿದ ಅವರು ಈಗಿನ ಹಳೆಯ ಕಟ್ಟಡವು ಚಿಕ್ಕದಾಗಿದ್ದು ಹೆಚ್ಚುತ್ತಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದ್ದರಿAದ ಸರ್ಕಾರವು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮ ನಿಯಮಿತದಿಂದ 2ಕೋಟಿ 82ಲಕ್ಷ ರೂ ಅನುದಾನದಲ್ಲಿ ನೂತನ ಪೊಲೀಸ್ ಠಾಣೆಯನ್ನು ನಿರ್ಮಿಸಲಾಗುತ್ತಿದೆ.
ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಬೇಕು, ಜಿಲ್ಲೆಯಲ್ಲಿ ಮಾದರಿ ಪೊಲೀಸ್ ಠಾಣೆಯಾಗಿರುವಂತೆ ಇರಬೇಕು, ರಾಜ್ಯ ಹೆದ್ದಾರಿಯಿಂದ 80 ಅಡಿ ಬಿಟ್ಟು ಕಟ್ಟಡ ನಿರ್ಮಿಸುವಂತೆ ತಿಳಿಸಿದರು.