ಹೈದರಾಬಾದ್: ಟಿ೨೦ ಪಂದ್ಯಕ್ಕೆ ಟಿಕೆಟ್ ಪಡೆಯಲು ಜಿಮ್ಖಾನಾ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿ ಕನಿಷ್ಠ ೪ ಜನರು ಗಾಯಗೊಂಡಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟಿçÃಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ ೨೫ ರಂದು ಭಾರತ-ಆಸ್ಟೆçÃಲಿಯಾ ಟಿ೨೦ ಪಂದ್ಯ ಆರಂಭವಾಗಲಿದೆ. ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್ಸಿಎ) ಜಿಮ್ಖಾನಾ ಮೈದಾನದಲ್ಲಿ ಪಂದ್ಯದ ಆಫ್ಲೈನ್ ಟಿಕೆಟ್ ನೀಡುವ ಮಾಹಿತಿ ತಿಳಿದು ಸುಮಾರು ೩೦,೦೦೦ ಜನರು ಮೈದಾನದಲ್ಲಿ ಕಾಣಿಸಿಕೊಂಡರು ಎಂದು ತಿಳಿದು ಬಂದಿದೆ. ಬೆಳಗ್ಗೆ ೫ ಗಂಟೆಯಿAದಲೇ ಕ್ರಿಕೆಟ್ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದು, ಟಿಕೆಟ್ ಕೌಂಟರ್ ತೆರೆಯುವ ವೇಳೆಗೆ ಸರತಿ ಸಾಲು ಉದ್ದವಾಯಿತು. ಜನರ ನೂಕುನುಗ್ಗಲು ಹಿನ್ನೆಲೆಯಲ್ಲಿ ಹೈದರಾಬಾದ್ನ ಅಧಿಕಾರಿಗಳು ಗುಂಪನ್ನು ನಿರ್ವಹಿಸಲು ಕಷ್ಟವಾಯಿತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು.