ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಶಾಸಕ ಹಿಟ್ನಾಳಗೆ ಮನವಿ

0
87

ಕೊಪ್ಪಳ : ನಗರದ ಗಣೇಶ ನಗರದಿಂದ ಓಜನಹಳ್ಳಿ ರಸ್ತೆಯವರೆಗೆ ಎರಡು ಬದಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಭಾಗ್ಯನಗರದ ಕುವೆಂಪು ವೃತ್ತದ ಸುತ್ತಮುತ್ತಲಿನ ಸಾರ್ವಜನಿಕರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದ ಮಧ್ಯ ಭಾಗದಲ್ಲಿರುವ ಓಜನಹಳ್ಳಿ ಕ್ರಾಸ್‌ನಿಂದ ಕೊಪ್ಪಳ ರೇಲ್ವೆ ಗೇಟ್ ನಂ 63 ರ ವರೆಗೆ ಇದು ಪೂರ್ವಿ ರಸ್ತೆಯಾಗಿದ್ದು ಸದರಿ ರಸ್ತೆಯ ಎರಡು ಬದಿ ಚರಂಡಿ ಹಾಗೂ ರಸ್ತೆ ನಿರ್ಮಾಣದ ಬೇಡಿಕೆಯನ್ನು ಹಲವಾರು ಬಾರಿ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು ಯಾವುದೇ ಪ್ರಯೋಜನೆಯಾಗಿಲ್ಲ, ರಸ್ತೆಯು ಗ್ರಾಮದ ಮಧ್ಯ ಭಾಗದಲ್ಲಿ ಇರುವದರಿಂದ ಮತ್ತು ನೇರ ಕೊಪ್ಪಳ ನಗರಕ್ಕೆ ಹೋಗಲು ಅನುಕೂಲ ರಸ್ತೆಯಿರುವುದರಿಂದ ತುಂಬಾ ವಾಹನಗಳು ಓಡಾಡುತ್ತಿರುತ್ತವೆ,ಇಲ್ಲಿಯವರೆಗೂ ಯಾವುದೇ ರಸ್ತೆ ನಿರ್ಮಾಣವಾಗದೆ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುತ್ತದೆ, ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ , ಮತ್ತು ಈ ಮೊದಲು ತಾವುಗಳು ಎಸ್ಸಿಪಿ ಹಾಗೂ ಟಿಎಸ್ಪಿ ಅನುದಾನದಲ್ಲಿ ರಸ್ತೆಯ ಕ್ರಿಯಾಯೋಜನೆಯನ್ನು ಸಲ್ಲಿಸಿದ್ದು ಅದು ಯಾವ ಕಾರಣಕ್ಕೆ ಕಾಮಗಾರಿ ಅನುಮೋದನೆಯಾಗಿಲ್ಲವೋ ತಿಳಿಯದು,ಈ ಕಾಮಗಾರಿಯನ್ನು ಕಲ್ಯಾಣ ಕರ್ನಾಟಕ ಯೋಜನೆಯಡಿಯಲ್ಲಿ ಸೇರಿಸಿ ಕಾಮಗಾರಿಯನ್ನು ಆದಷ್ಟು ಬೇಗ ಮಂಜೂರಿ ಮಾಡಿಸಿ ಕಾರ್ಯ ರೂಪಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ಈ ಭಾಗದ ನೊಂದ ಹಿರಿಯ ನಾಗರಿಕರು , ಮಹಿಳೆಯರು , ಯುವಕರು ಹಾಗೂ ಸಾರ್ವಜನಿಕರು ಮನವಿ ಮಾಡುವುದಾಗಿ ತಿಳಿಸಿದ್ದಾರೆ.

Previous articleಶಾಲೆ ಆರಂಭ:ಪೊಲೀಸರಿoದ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೆರ್ಯ
Next articleಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ: ಸಚಿವ ಹಾಲಪ್ಪ ಆಚಾರ್

LEAVE A REPLY

Please enter your comment!
Please enter your name here