ಸಿರುಗುಪ್ಪ: ತಾಲೂಕಿನ ಹಾಗಲೂರು ಹೊಸಳ್ಳಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟ ಮಾಡದಿರುವ ಬಗ್ಗೆ ಮಾಹಿತಿಯಿಂದಶುಕ್ರವಾರ ವರದಿಗೆ ತೆರಳಿದಾಗ ಅಲ್ಲಿನ ಮುಖ್ಯ ಗುರುಗಳು ಮೊದಲು ಆಹಾರ ಮೇಳ ಮಾಡುತ್ತಿರುವುದಾಗಿ ಹಾರಿಕೆ ಉತ್ತರ ನೀಡಿದರು.
ಮಕ್ಕಳನ್ನು ಊಟಕ್ಕೆ ಮನೆಗೆ ಕಳಿಸಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಹೇಳಿದ ನಂತರ ಮುಖ್ಯ ಗುರುಗಳಾದ ಅಶೋಕ್ ಮಿರ್ಜೆ ಅವರು ಹೌದು ಅಡುಗೆ ಅನಿಲ ಸಿಲಿಂಡರ್ ಖಾಲಿಯಾಗಿದ್ದರಿಂದ ಮಕ್ಕಳನ್ನು ಮನೆಗೆ ಕಳಿಸಲಾಗಿದೆ ಇಂದು ಅಡಿಗೆ ಮಾಡಿಲ್ಲವೆಂದರು.
ಒAದೇ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು ತಾಲೂಕಿನ ಗಡಿಭಾಗದ ಗ್ರಾಮವಾಗಿದ್ದರಿಂದ ಅತಿ ಹೆಚ್ಚು ದಾಖಲಾತಿ ಇದ್ದರೂ ಸಿಲಿಂಡರಿನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಇದೇ ಮೊದಲೇನಲ್ಲ ಪ್ರತಿ ತಿಂಗಳಲ್ಲಿ ಎರಡು ಮೂರು ಸಲ ಇದೇ ಸಮಸ್ಯೆಯಾಗುತ್ತದೆ. ಗ್ಯಾಸ್ ಅಭಾವದ ನೆಪದಿಂದ ಅನ್ನ ಸಾಂಬಾರು ಮಾಡದೇ ಹೆಚ್ಚಾಗಿ ಚಿತ್ರಾನ್ನ, ಟೊಮೋಟೋ ರೈಸ್, ಪಲಾವ್ ಮಾಡುತ್ತಾರೆ.ಮೂರು ತಿಂಗಳಿAದ ಶ್ರಾವಣ ಮಾಸದ ನೆಪ ಹೇಳಿ ವಾರಕ್ಕೆ ಎರಡು ಬಾರಿ ಕೊಡುವ ಮೊಟ್ಟೆ ಅಥವಾ ಬಾಳೆಹಣ್ಣು ನೀಡುತ್ತಿಲ್ಲವೆಂದು ಆರೋಪಿಸಿದರು.