“ಗೃಹರಕ್ಷಕ ಸಿಬ್ಬಂದಿಗಳಿಗೆ ಕಾಡುತ್ತಿರುವ ಜೀವನಭದ್ರತೆ.”

0
80


ಮರಿಯಮ್ಮನಹಳ್ಳಿ: ಕೊರೋನಾ ಸಂರ‍್ಭದಲ್ಲಿ ಹಗಲು ರಾತ್ರಿ ಮಳೆ ಬಿಸಿಲೆನ್ನದೆ ಸರ‍್ವಜನಿಕರ ರಕ್ಷಣೆಗಾಗಿ ಮತ್ತು ಕೋವಿಡ್ ನಿಯಂತ್ರಣಕ್ಕಾಗಿ ದುಡಿದಿದ್ದೇವೆ. ಆದರೆ ಮೂರು ತಿಂಗಳಿನಿಂದ ಗೌರವಧನ ಬಾರದೆ ಕುಟುಂಬ ನರ‍್ವಹಣೆ ದುಸ್ತರವಾಗಿದೆ ಎಂದು ಗೃಹ ರಕ್ಷಕ ದಳ ಸಿಬ್ಬಂದಿ ನೋವು ವ್ಯಕ್ತಪಡಿಸಿದ್ದಾರೆ.

ಕೊರೋನಾ 1ನೇ ಮತ್ತು 2ನೇ ಅಲೆಯ ಸಂರ‍್ಭದಲ್ಲಿ ನೂರಾರು ಪೊಲೀಸರಿಗೆ ಸೋಂಕು ತಗುಲಿ ಕೋವಿಡ್ ನಿಯಂತ್ರಣ ಕರ‍್ಯಕ್ಕೆ ಬಾರಿ ಹಿನ್ನಡೆಯಾಗಿತ್ತು. ಪೊಲೀಸ್ ಇಲಾಖೆಗೆ ದೊಡ್ಡ ಸಿಬ್ಬಂದಿ ಕೊರತೆಯಾದಾಗ ತಮ್ಮ ಜೀವದ ಹಂಗು ತೊರೆದು ಸರ‍್ವಜನಿಕರ ಸೇವೆಗೆ ಅಣಿಯಾದವರು ಗೃಹ ರಕ್ಷಕ ದಳದ ಸಿಬ್ಬಂದಿ. ಆದರೆ ಅವರಿಗೆ ಸಹಾಯಧನ ಬಾರದೆ ತಿಂಗಳುಗಳೇ ಆಗಿವೆ.

ಸುಪ್ರೀಂ ಕರ‍್ಟ್ ಗೃಹ ರಕ್ಷಕ ಸಿಬ್ಬಂದಿಗೆ 750 ರೂ. ನೀಡಬೇಕು ಎಂದು ಆದೇಶ ಹೊರಡಿಸಿದೆ. ತೆಲಂಗಾಣ ಮತ್ತು ಕೇರಳದಲ್ಲಿ ಅವರಿಗೆ ಗೌರವ ಧನವಾಗಿ 750 ರೂ.ನೀಡಲಾಗುತ್ತಿದೆ.

ರಾಜ್ಯದಲ್ಲಿ ಸಿಬ್ಬಂದಿಗೆ ಪೊಲೀಸ್ ಇಲಾಖೆ ಲಕ ನಿಯೋಜನೆಗೊಂಡಲ್ಲಿ 750 ರೂ.ಪಾವತಿಸಬೇಕು. ಜಿಲ್ಲಾಧಿಕಾರಿ ನಿಯೋಜಿಸಿದರೆ 380 ರೂ. ಗೌರವ ಧನ ಪಾವತಿಸಬೇಕಾಗುತ್ತದೆ. ಆದರೆ ಇಲ್ಲಿವರೆಗೂ ಯಾವುದೇ ಹಣ ನೀಡಿಲ್ಲ ಎಂದು ಹೆಸರು ಹೇಳಲು ಇಷ್ಟಪಡದ ಗೃಹರಕ್ಷಕ ಸಿಬ್ಬಂದಿ “ಬೆಳಗಾಯಿತು”ಗೆತಿಳಿಸಿದ್ದಾರೆ.

ರಾಜ್ಯದಲ್ಲಿ 24 ಸಾವಿರಕ್ಕೂ ಹೆಚ್ಚು ಹೋಂ ಗರ‍್ಡ್ಗಳು ಕರ‍್ಯ ನರ‍್ವ ಹಿಸುತ್ತಿದ್ದು, ರಾಜಕೀಯ ಸಮಾವೇಶ,ಚುನಾವಣೆ ಕೆಲಸ, ನೆರೆ ಪರಿಹಾರ, ರಾಷ್ಟ್ರೀಯ ವಿಕೋಪ ಪರಿಸ್ಥಿತಿ, ಹಬ್ಬ ಗಳು, ತರ‍್ತು ಸಂರ‍್ಭ ಮತ್ತು ಟ್ರಾ ಫಿಕ್ ನಿಯಂತ್ರಣಕ್ಕೆ ಹಗಲು ರಾತ್ರಿ ದುಡಿಯುತ್ತಾರೆ. ಪೊಲೀಸರಷ್ಟೇ ಸರಿ ಸಮನವಾಗಿ ಕೆಲಸ ಮಾಡುವ ಇವರಿಗೆ ಗೌರವಧನದಲ್ಲಿ ತಾರತಮ್ಯ ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಸರಿಯಾದ ಗೌರವಧನ ನೀಡದೆ ಇರುವುದರಿಂದ ಸಿಬ್ಬಂದಿಗಳು ಉದ್ಯೋಗ ಬಿಟ್ಟಿದ್ದಾರೆ. ಕೋವಿಡ್ನಿಂದ ರ‍್ಥಿಕ ಹೊರೆ ಹೆಚ್ಚಾಗಿ ಕುಟುಂಬ ನರ‍್ವಹಣೆ ಮಾಡಲಾಗದೆ ಸಮಸ್ಯೆ ಎದುರಾಗಿ ಕೆಲಸ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Previous articleಐಪಿಎಲ್‌ಗೆ 2 ಹೊಸ ತಂಡಗಳು: ಬಿಡ್ಡಿಂಗ್‌ಗೆ ₹ 2000 ಕೋಟಿ ಮೂಲಬೆಲೆ ನಿಗದಿಪಡಿಸಿದ ಬಿಸಿಸಿಐ
Next articleಪ್ಯಾರಾಲಿಂಪಿಕ್ಸ್: ಕಂಚಿನ ಪದಕಕ್ಕೆ ಗುರಿಯಿಟ್ಟ ಭಾರತದ ಶೂಟರ್ ಸಿಂಗ್‌ರಾಜ್

LEAVE A REPLY

Please enter your comment!
Please enter your name here