ಕೋವಿಡ್ ಸೋಂಕು ಹೆಚ್ಚಳ: ಆಸ್ಪತ್ರೆ ಸನ್ನದ್ಧವಾಗಿಸಲು ಸೂಚನೆ

0
314

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ಮೂರನೇ ಅಲೆಯು ದಿನೇ ದಿನೇ ಏರುಗತಿಯಲ್ಲಿ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಆಮ್ಲಜನಕ, ಸಿಟಿಸ್ಕಾö್ಯನ್, ಎಕ್ಸರೇ ಘಟಕಗಳು ಸೇರಿದಂತೆ ಔಷಧ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 2021-22ನೇ ಸಾಲಿನ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಟಿಸ್ಕಾö್ಯನ್, ಎಕ್ಸರೇ ಘಟಕಗಳು ಇದ್ದು, ಇವು ನಿರಂತರವಾಗಿ ಕೆಲಸ ನಿರ್ವಹಿಸಲು ಸುಸ್ಧಿತಿಯಲ್ಲಿಡಬೇಕು. ವೈದ್ಯರ ಕೊರತೆಯಾದಲ್ಲಿ ಅದಕ್ಕೆ ಬೇಕಾದ ಎಲ್ಲ ಅನುಮೋದನೆಯನ್ನು ಸರ್ಕಾರ ನೀಡಲಿದೆ. ಅದ್ದರಿಂದ ಸಾರ್ವಜನಿಕರು ಕೋವಿಡ್ ಮೂರನೇ ಅಲೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.
ಈ ವೇಳೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಎಷ್ಟು ಆಮ್ಲಜನಜಕ ಘಟಕಗಳು ಕಾರ್ಯಾರಂಭ ಮಾಡಿವೆ ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕ ಪೂರೈಸಬಲ್ಲದೇ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕೇಳಿದಾಗ ಇನ್ನೂ ಒಂದು ವಾರದಲ್ಲಿ ಇದಕ್ಕೆ ಬೇಕಾದ ಜನರೇಟರ್, ವಿದ್ಯುತ್ ಸಂಪರ್ಕ ಆದನಂತರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಲಿವೆ. ಈಗಾಗಲೇ ಕೇಂದ್ರ ಕಚೇರಿಯಿಂದ ಇದಕ್ಕೆ ಬೇಕಾದ ಜನರೇಟರ್, ವಿದ್ಯುತ್ ಸಂಪರ್ಕದ ವ್ಯವಸ್ಥೆಗೆ ಟೆಂಡರ್ ಕರೆಯಲಾಗಿದ್ದು, ವಾರದಲ್ಲಿ ಅನುಷ್ಠಾನವಾಗಲಿದೆ ಎಂದು ತಿಳಿಸಿರುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಸಭೆಗೆ ತಿಳಿಸಿದರು. ಇದಕ್ಕೆ ಶಾಸಕರು, ಆಮ್ಲಜನಕ ಉತ್ಪಾದನಾ ಘಟಕಗಳಿಂದ ಆಮ್ಲಜನಕ ಉತ್ಪಾದನೆಯಾಗಲಿದೆ ಎಂದು ಭಾವಿಸಿದ್ದೇವು. ಆದರೆ ಆಮ್ಲಜನಕ ಉತ್ಪಾದನೆ ಮಾಡದೇ ಇರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಮೂರನೇ ಅಲೆಯಲ್ಲಿ ಸಾವು-ನೋವು ಸಂಭವಿಸದAತೆ, ಬೆಡ್ ಸಮಸ್ಯೆ, ಆಮ್ಲಜನಕ, ಔಷದಿಯ ಕೊರತೆ ಬಗ್ಗೆ ಯಾವುದೇ ನೆಪ ಹೇಳುವಂತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಹಾಗೂ ಜಿಲ್ಲಾ ಶಸ್ತçಚಿಕಿತ್ಸಕರಿಗೆ ತಾಕೀತು ಮಾಡಿದರು.

Previous articleವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸಚಿವ ಆನಂದ್ ಸಿಂಗ್ ಗೆ ಮನವಿ ಪತ್ರ
Next articleವಾರದಸಂತೆ:ಅಧಿಕಾರಿಗಳು,ವರ್ತಕರ ಮದ್ಯೆ ವಾಗ್ವಾದ

LEAVE A REPLY

Please enter your comment!
Please enter your name here