ಬೆಂಗಳೂರು: ಕೊವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರು ತಜ್ಞರ ತಂಡ ಮತ್ತು ಉನ್ನತ್ತ ಮಟ್ಟದ ಅಧಿಕಾರಿಗಳು ಚರ್ಚೆ ನಡೆಸಿ ಕೊವಿಡ್ ನಿಯಮಗಳನ್ನ ಸಿದ್ದ ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್ ಕೊವಿಡ್ ಮಾರ್ಗ ಸೂಚಿಗಳನ್ನ ಬಿಡುಗಡೆಗೊಳಿಸಿ ಬೆಂಗಳೂರಿನಲ್ಲಿ 10 ಮತ್ತು 12 ನೇ ತರಗತಿಗಳನ್ನ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನ ಭೌತಿಕವಾಗಿ ನಿಲ್ಲಿಸಲು ತೀರ್ಮಾನಿಸಲಾಗಿದೆ ಮತ್ತು ಆನ್ ಲೈನ್ ತರಗತಿಗಳಿಗೆ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಮುಂದಿನ 2 ವಾರಗಳು 6ನೇ ತಾರೀಕಿನಿಂದ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 05 ರ ವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಆಹಾರ ವಸ್ತು , ಹಾಲು, ತರಕಾರಿ, ಅಗತ್ಯ ವಸ್ತುಗಳು ಮತ್ತು ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.