ಕೋವಿಡ್ ಚಿಕಿತ್ಸೆಗೆ ಬಳಸಬಹುದಾದ ಪ್ರಪ್ರಥವ ಔಷಧಿ – ಮಾಲ್ನುಪಿರವೈರ್ ಮಾತ್ರೆ..

  0
  234

  ಕೋವಿಡ್ ಅಲೆಗಳ ಮೇಳೆ ಅಲೆಗಳಂತೆ ಅಪ್ಪಳಿಸಿ, ಎಲ್ಲಾ ದೇಶಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ. ಜನರ ಜೀವನ ಅಸ್ತವ್ಯಸ್ತವಾಗುವಂತೆ ಮಾಡಿವೆ. ಜನರು ಸದಾಕಾಲ ಸಾವು ಬದುಕಿನ ನಡುವೆ ಹೋರಾಡುವಂತಹ ಪರಿಸ್ಥಿತಿಯನ್ನು ಉಂಟುಮಾಡಿವೆ. ವಿಜ್ಞಾನ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವ ಈ ಕಾಲದಲ್ಲಿ ಎಕಶ್ಚಿತ್ ಒಂದು ವೈರಾಣುವನ್ನು ಮಟ್ಟಹಾಕುವಲ್ಲಿ ನಮ್ಮ ವೈದ್ಯರು, ವಿಜ್ಞಾನಿಗಳು ಸೋತರು ಅಂತ ಅಂದುಕೊAಟರೆ ಅದು ನಮ್ಮ ಮೂರ್ಖತನ.. ಸಮಸ್ಯೆಗಳು ಹೇಳಿ ಕೇಳಿ ಬರುವುದಿಲ್ಲ. ಹೀಗೆ ಅನಿರೀಕ್ಷಿತವಾಗಿ ತಲೆದೋರುವ ಸಮಸ್ಯೆಗಳಿಗೆ ವಿಜ್ಞಾನದ ಮೂಲಕವೇ ಉತ್ತರ ಕೊಡಬೇಕೆಂದರೆ ಮತ್ತು ಈ ಸಮಸ್ಯೆಯನ್ನು ಬೇರು ಸಮೇತ ಕಿತ್ತೊಗೆಯಬೇಕೆಂದರೆ, ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾದರೆ, ಅದಕ್ಕೆ ಕೊಂಚ ಸಮಯಬೇಕು. ಕೊರೊನಾ ವಿಶ್ವವನ್ನು ವಿನಾಶದತ್ತ ಕೊಂಡೊಯ್ಯಲು ಯೋಜನೆ ರೂಪಿಸಿದರೆ, ಇದನ್ನು ತಡೆಗಟ್ಟುವಲ್ಲಿ ನಮ್ಮ ವೈದ್ಯರು, ವಿಜ್ಞಾನಿಗಳು ಹರಸಾಹಸಪಡುತ್ತಿದ್ದಾರೆ. ಇದರ ಫಲವಾಗಿಯೇ ಇಂದು ವಿಶ್ವದೆಲ್ಲೆಡೆ ಕೋವಿಡ್ ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆ ಲಭ್ಯವಿರುವುದು. ಇದೀಗ ಪಟ್ಟಿಗೆ ಮತ್ತೊಂದು ಔಷಧ ಅಂದರೆ, ಕೋವಿಡ್ ಸೋಂಕಿನ ಚಿಕಿತ್ಸೆಗಾಗಿ ಬಳಸಲಾಗುವ ಔಷಧವೊಂದು ಬೆಳಕಿಗೆ ಬಂದಿದೆ. ಅದುವೇ – ಮಾಲ್ನುಪಿರವೈರ್ ಮಾತ್ರೆ.
  ಹೈದ್ರಾಬಾದ್ ಮೂಲದ ಡಾ. ರೆಡ್ಡಿ ಲೆಬೋರೆಟ್ರಿಸ್ ಲಿಮಿಟೆಡ್, ಮೆಕ್ ಡ್ರಗ್‌ನ ಜೆನೆರಿಕ್ ರ‍್ಷನ್ ಅನ್ನು(ಸಾಮಾನ್ಯ ಆವೃತ್ತಿಯನ್ನು) ಬಿಡುಗಡೆ ಮಾಡಲು ಸಜ್ಜಾಗಿದೆ.

  Previous articleಕನ್ನಡ ಕವಿ “ಚಂಪಾ” ನಿಧನಕ್ಕೆ ಕಲಾಕೇಂದ್ರದಿಂದ ಸಂತಾಪ
  Next article“ಸ್ವಚ್ಛ, ಜನಪರ ಆಡಳಿತ ಕೆ.ಆರ್.ಎಸ್ ಪಕ್ಷದಿಂದ ಸಾಧ್ಯ.”

  LEAVE A REPLY

  Please enter your comment!
  Please enter your name here