ಕೊರೊನಾ ವೈರಾಣುವಿನ ಮೂಲದ ಹುಡುಕಾಟಕ್ಕೆ ಬ್ರೇಕ್ ತಂದ ವಿಶ್ವ ಆರೋಗ್ಯ ಸಂಸ್ಥೆ..

  0
  80

  ಕೊರೊನಾ ವೈರಾಣು ಚೀನಾ ವಿಜ್ಞಾನಿಗಳಿಂದ ನಿರ್ಮಿತವಾದದ್ದು, ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ತುಂಬಾ ದಿನಗಳೆ ಕಳೆದಿವೆ. ಈ ವಿಷಯಕ್ಕೆ ಸಂಬAಧ ಪಟ್ಟ ಹಲವು ಸಾಕ್ಷಾö್ಯಧಾರಗಳು ದಿನೇ ದಿನೇ ಒಂದೊAದಾಗಿ ಬೆಳಕಿಗೆ ಬರುತ್ತಿವೆ. ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂದಿಸಲು ಹೊಂಚುಹಾಕಿ, ಜಗತ್ತಿಕ್ಕೆ ತನ್ನ ಕ್ರೂರವಾದ ಆದರೇ ನೈಜ್ಯವಾದ ಮುಖ ದರ್ಶನ ಮಾಡಿದ ಚೀನಾ, ಇದೀಗ ಎಲ್ಲಾ ದೇಶಗಳ ಕೆÀಂಗಣ್ಣಿಗೆ ಗುರಿಯಾಗಿದೆ. ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವೇ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಸಂಕೋಲೆಯಲ್ಲಿ ಸಿಲುಕಿ ಒದ್ದಾಡುವಂತೆ ಮಾಡಿದ ಚೀನಾಗೆ ಪಾಠ ಕಲಿಸುವ ಎಲ್ಲಾ ದೇಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿವೆ.
  ಇದರ ಬೆನ್ನಲೆ, ಕೊರೊನಾ ವೈರಾಣುವಿನ ಮೂಲವನ್ನು ಕಂಡುಹಿಡಿಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಸಹ ವಿಜ್ಞಾನಿಗಳ ಒಂದು ತಂಡವನ್ನು ರಚಿಸಿ, ಚೀನಾಗೆ ಕಳುಹಿಸಿತ್ತು. ಸರಿಸುಮಾರು ಆರು ತಿಂಗಳಿನಿAದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ತಂಡ ಚೀನಾದಲ್ಲೇ ಬೀಡುಬಿಟ್ಟಿದ್ದು, ಕೊರೊನಾ ವೈರಾಣುವಿನ ಮೂಲದ ಹುಡುಕಾಟದಲ್ಲಿದ್ದಾರೆ. ಹೀಗಿರುವಾಗ ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಅಚಾನಕ್ ಚೀನಾದಲ್ಲಿ ಕೊರೊನಾ ವೈರಾಣುವಿನ ಮೂಲದ ಹುಡುಕಾಟಕ್ಕೆ ಬ್ರೇಕ್ ಹಾಕಿದೆ ಮತ್ತು ಅತಿಶೀಘ್ರದಲ್ಲಿ ಈ ಕೆಲಸವನ್ನು (ಚೀನಾದಲ್ಲಿ ಕೊರೊನಾ ವೈರಾಣುವಿನ ಮೂಲದ ಹುಡುಕಾಟವನ್ನು) ಮುಗಿಸಬೇಕಾಗಿ ಆದೇಶ ಹೊರಡಿಸಿದೆ.
  ವಿಶ್ವದ ಪ್ರಖ್ಯಾತ ವಿಜ್ಞಾನಿ ಮರಿಯಾನ್ ಕೂಪಮಾನ್‌ರವರ ಮುಂದಾಳತ್ವದಲ್ಲಿ ಚೀನಾದಲ್ಲಿ ಕೊರೊನಾ ವೈರಾಣುವಿನ ಮೂಲವನ್ನು ಪತ್ತೆಹೆಚ್ಚುವ ಕೆಲಸ ಪ್ರಾರಂಭವಾಗಿತ್ತು. ಚೀನಾದ ಯಾವ ಭಾಗದಲ್ಲಿ ಈ ಸಂಕ್ರಾಮಿಕ ಖಾಯಿಲೆ ಸುಳಿವೇ ಇಲ್ಲದೆ ಹರಡಲು ಆರಂಭಿಸಿತ್ತು ಎಂಬುದರÀ ಕುರಿತಾಗಿ ಸಂಶೋಧನೆ ನಡೆಸಲಾಗುತ್ತಿತ್ತು. ಚೀನಾದಲಿ ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಬಾವುಲಿಗಳಿಂದ ಮನುಷ್ಯನಿಗೆ ಹರಡಿರು ಖಾಯಿಲೆಯಂದು ಸ್ವತಃ ಚೀನಾ ಸರ್ಕಾರ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರಿಂದ, ಅಲ್ಲಿನ ಕಾಡು ಬಾವುಗಳ ಮೇಲೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದರ ಜೊತೆಗೆ ಪ್ರಾಣಿ ಸಾಕಣಿಕೆಗಳಲ್ಲಿನ ಪ್ರಾಣಿಗಳಲ್ಲಿ ವೈರಾಣುವಿನ ಸೋಂಕು ತಗಲಿರುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅವುಗಳ ಮೇಲು ಸಹ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ವಿಷಯಕ್ಕೆ ಸಂಬAಧಪಟ್ಟ ಇನ್ನು ಹಲವು ಭಗೆಯ ವೈದ್ಯಕೀಯ ಸಂಶೋಧನೆಗಳು ಇನ್ನು ಪೀಕ್ಷಾ ಹಂತದಲ್ಲೇ ಇದ್ದವು. ಹೀಗಿರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕವಾಗಿ ಕೊರೊನಾ ವೈರಾಣುವಿನ ಮೂಲದ ಹುಡುಕಾಟಕ್ಕೆ ಬ್ರೇಕ್ ಹಾಕಿತ್ತು ಮತ್ತು ಇದೀಗ ಅತಿಶೀಘ್ರದಲ್ಲಿ ಈ ಕೆಲಸವನ್ನು (ಚೀನಾದಲ್ಲಿ ಕೊರೊನಾ ವೈರಾಣುವಿನ ಮೂಲದ ಹುಡುಕಾಟವನ್ನು) ಮುಗಿಸಬೇಕಾಗಿ ಆದೇಶ ಹೊರಡಿಸಿದೆ.
  ಚೀನಾದ ವುಹಾನ್ ಲ್ಯಾಬ್‌ನಲ್ಲಿ ಕೊರೊನಾ ವೈರಾಣುವನ್ನು ಸೃಷ್ಟಿಸಲಾಗಿದೆ ಎಂಬ ಮಾತು ವಿಶ್ವದ ನಾನಾ ಭಾಗಗಳ್ಲಿ ಕೇಳಿಬರುತ್ತಿದ್ದ ಸಂದರ್ಭದಲ್ಲಿ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗದ ರಾಷ್ಟಿçÃಯ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಫೌಸಿ, ‘ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಬಾವುಲಿಗಳಿಂದ ಮನುಷ್ಯನಿಗೆ ಹರಡಿರು ಖಾಯಿಲೆ. ಇದನ್ನು ವುಹಾನ್ ಲ್ಯಾಬ್‌ನಲ್ಲಿ ನಿರ್ಮಿಸಲಾಗಿಲ್ಲ’ ಎಂದು ಹೇಳುವ ಮೂಲಕ ಚೀನಾ ಮೇಲಿದ್ದ ಎಲ್ಲರ ಅನುಮಾನಕ್ಕೆ ತೆರೆಯೆಳೆದಿದ್ದರು.

  Previous articleಚಿತ್ರದುರ್ಗ ನಗರ ಸುಗಮ ಸಂಚಾರಕ್ಕೆ ಪಾರ್ಕಿಂಗ್ ವ್ಯವಸ್ಥೆ
  Next articleಐಪಿಎಲ್‌ಗೆ 2 ಹೊಸ ತಂಡಗಳು: ಬಿಡ್ಡಿಂಗ್‌ಗೆ ₹ 2000 ಕೋಟಿ ಮೂಲಬೆಲೆ ನಿಗದಿಪಡಿಸಿದ ಬಿಸಿಸಿಐ

  LEAVE A REPLY

  Please enter your comment!
  Please enter your name here