ಕೊರೊನಾ ವೈರಾಣುವಿನ ಈ ರೂಪಾಂತರವು ಲಸಿಕೆ ಪಡೆದವರೊಗೂ ಬಲುಬೇಗ ಹರಡುತ್ತದೆ ಎಚ್ಚರಿಕೆ!

  0
  171


  ಕೋವಿಡ್ ಎರಡನೇ ಅಲೆಯು ಇನ್ನೇನು ಮುಗಿಯುತ್ತಿದೆ ಅನ್ನುವಷ್ಟರಲ್ಲಿ, ಮೂರನೇ ಅಲೆಯ ಭೀತಿ ಕಾಡಲು ಶುರುವಾಯಿತು. ನಮಗೆಲ್ಲ ತಿಳಿದಿರುವಂತೆ, ಕೋವಿಡ್ ಮೊದಲ ಅಲೆಗಿಂತ ಎರಡನೆ ಅಲೆಯ ತೀವ್ರತೆ ಹೆಚ್ಚಾಗಿತ್ತು. ಇದರಿಂದಾಗಿ ಕೋವಿಡ್ ಮೂರನೆ ಅಲೆ ಕುರಿತಾಗಿ ಜನರಲ್ಲಿ ಆತಂಕ ಹೆಚ್ಚಾಯಿತು. ಆಗಸ್ಟ್ ಅಂತ್ಯದೊಳಗಾಗಿ ಭಾರತಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂದು ಸ್ವತಃ ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ (ಐಸಿಎಂಆರ್) ಸ್ಪಷ್ಟಪಡಿಸಿತ್ತು. ಈ ಕಾರಣದಿಂದಾಗಿಯೇ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆಯನ್ನು ಬಿರುಸುಗೊಳಿಸಲಾಯಿತು. ಸೆಪ್ಟೆಂಬರ್ ಒಳಗಾಗಿ ಭಾರತದ ಪ್ರತಿಯೊಬ್ಬ ನಾಗರಿಕನೂ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆಯ ಕನಿಷ್ಟ ಒಂದು ಡೋಸ್‌ಅನ್ನು ಪಡೆದಿರತಕ್ಕದ್ದು ಎಂಬುದಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೆ ಭಾರತದ ಬಹುತೇಕ ಜಿಲ್ಲೆಗಳು ಶೇಕಡ 100ರಷ್ಟು ಕೋವಿಡ್ ಲಸಿಕೆ ವಿತರಣೆಯನ್ನು ಸಾಧಿಸಿವೆ. ದೇಶದಲ್ಲಿ ಲಸಿಕೆ ವಿತರಣೆಯು ಪೂರ್ಣಗೊಂಡರೆ ಯಾವ ಸಾಂಕ್ರ‍್ರಾಮಿಕ ರೋಗವು ನಮನ್ನು ಏನು ಮಾಡುವುದಿಲ್ಲ ಅಂತ ನೀವು ಭಾವಿಸಿದ್ದರೆ, ಅದು ನಿಮ್ಮ ಭ್ರಮೆ ಅಷ್ಟೆ.. ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆಯನ್ನು ಪಡೆದರೂ ಸಹ ಅತಿ ವೇಗವಾಗಿ ನಮ್ಮನ್ನು ಆವರಿಸುವ ಕೊರೊನಾ ವೈರಾಣುವಿನ ರೂಪಾಂತರವೊAದು ಬೆಳಕಿಗೆ ಬಂದಿದೆ. ಈ ರೂಪಾಂತವು ಎಷ್ಟು ಶಕ್ತಿಶಾಲಿಯಾಗಿದೆಯಂದರೇದಿದರ ಮುಂದೆ ಲಸಿಕೆ ಟುಸ್ ಪಟಾಕಿ ಅಂತಾನೇ ಹೇಳಬಹುದು. ಹಾಗಿದ್ರೆ ಈ ರೂಪಾಂತರ ಯಾವುದು? ಇದು ಎಲ್ಲಿ ಪತ್ತೆಯಾಗಿದೆ? ಇದನ್ನು ತಡೆಗಟ್ಟಲು ನಾವೇನು ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..
  ಕೊರೊನಾ ವೈರಾಣುವಿನ ರೂಪಾಂತರಗಳಲ್ಲಿ ಒಂದಾದ ಸಿ.1.2 ರೂಪಾಂತರವು, ದಕ್ಷಿಣ ಆಫ್ರಿಕಾ ಮತ್ತು ಇನ್ನು ವಿಶ್ವದ ಬಹುತೇಕ ದೇಶಗಳಲ್ಲಿ ಪತ್ತೆಯಾಗಿದೆ. ಈ ಕುರಿತು, ನ್ಯಾಷ್ನಲ್ ಇನ್ಸಿ÷್ಟಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಸ್ ಮತ್ತು ಕ್ವಾಜುಲು ನಟಲ್ ರೀಸರ್ಚ್ ಇನೋವೇಶನ್ ಆಂಡ್ ಸೀಕ್ವೆನ್ಸಿಂಗ್ ಪ್ಲಾö್ಯಟ್‌ಫಾರ್ಮ್ನ ವಿಜ್ಞಾನಿಗಳು ವರದಿಯೊಂದನ್ನು ಪ್ರಕಟಿಸಿದ್ದು, ಸಿ.1.2 ರೂಪಾಂತರವು ಕೊರೊನಾ ವೈರಾಣುವಿನಿಗಿಂತ ಮತ್ತು ಕೊರೊನಾ ವೈರಾಣುವಿನ ರೂಪಾಂತರಗಳಿಗಿAತ ಅತಿಹೆಚ್ಚು ತ್ವರಿತವಾಗಿ ಹರಡಬಲ್ಲ ರೂಪಾಂತರವಾಗಿದೆ. ಲಸಿಕೆ ಪಡೆದವರಿಗೂ ಸಹ ಸಿ.1.2 ರೂಪಾಂತರದ ಸಾಂಕ್ರಾಮಿಕ ಖಾಯಿಲೆ ಹರಡಬಲ್ಲದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಸಿ.1.2 ರೂಪಾಂತರವು ಪ್ರಪ್ರಥಮವಾಗಿ ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿತು. ಆ ಬಳಿಕ ಚೀನಾ, ಮಾರಿಷಸ್, ಇಮಗ್ಲೆಂಡ್, ನಿವ್ಜೆಲೆಂಡ್, ಸ್ವಿಜರ್‌ಲ್ಯಾಂಡ್ ಹಾಗು ಇನ್ನು ಹಲವಾರು ದೇಶಗಳಲ್ಲಿ ಸಿ.1.2 ರೂಪಾಂತರವು ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮೇ ತಿಂಗಳಿನಲ್ಲಿ ಶೇಕಡ 0.2ರಷ್ಟಿದ್ದ ಸಿ.1.2 ರೂಪಾಂತರದ ಹರಡುವಿಕೆಯು, ಜೂನ್ ತಿಂಗಳಿನಲ್ಲಿ ಶೇಕಡ 1.6ಕ್ಕೆ ಏರಿತು ಹಾಗು ಜುಲೈ ತಿಂಗಳಿನಲ್ಲಿ ಶೇಕಡ 2ರಷ್ಟು ಏರಿಕೆ ಕಂಡುಕೊAಡಿತು.

  Previous article“ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಇಲ್ಲದೆ, ಪ್ರಜಾಪ್ರಭುತ್ವ ಉಳಿಯುವುದಿಲ್ಲ”: ಅಮಿತ್ ಶಾ
  Next articleಓವಲ್ ಟೆಸ್ಟ್: ಪಂದ್ಯದ ವೇಳೆ ಕೊಹ್ಲಿಗೆ ಬೂಮ್ರಾ ನೀಡಿದ ಈ ಉಪಾಯ 2 ಪ್ರಮುಖ ವಿಕೆಟ್ ಬೀಳಿಸಿದವು!

  LEAVE A REPLY

  Please enter your comment!
  Please enter your name here